ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾಲಿ ಧನಂಜಯ್! ಬಹುಬೇಡಿಕೆಯ ನಟನ ಸಿನಿಪಯಣ ಹೀಗಿದೆ!

ಆಗಸ್ಟ್ 23, 2025 - 12:00
 0  9
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾಲಿ ಧನಂಜಯ್! ಬಹುಬೇಡಿಕೆಯ ನಟನ ಸಿನಿಪಯಣ ಹೀಗಿದೆ!

ಸ್ಯಾಂಡಲ್​ವುಡ್​​ನ ನೆಚ್ಚಿನ ನಟ ಡಾಲಿ ಧನಂಜಯ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 39ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಂತು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಭರಪೂರ ಶುಭಶಯ ಕೋರಿದ್ದಾರೆ. ಆದ್ರೆ ಈ ಭಾರೀ ಆಚರಿಸಿಕೊಳ್ಳೋದಿಲ್ಲ..ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ ಡಾಲಿ ಧನಂಜಯ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

1986ರ ಆಗಸ್ಟ್ 23ರಂದು ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಜನಿಸಿದ ಇವರು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟರಾಕ್ಷಸ ಖ್ಯಾತಿಯ ಧನಂಜಯ್​ ಅವರಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಡಾಲಿ ಧನಂಜಯ್​ ಬಾಲ್ಯ, ಶಿಕ್ಷಣ, ಸಿನಿಪಯಣ ಹೀಗಿದೆ ನೋಡಿ.ಧನಂಜಯ್​ ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು. ತಂದೆ ಶಿಕ್ಷಕರಾಗಿರುವ ಹಿನ್ನೆಲೆ ಮಗನಿಗೂ ಕೂಡ ಬಾಲ್ಯದಿಂದಲೇ ವಿದ್ಯೆ ಒಲಿದಿತ್ತು.

ಅದಕ್ಕೆ ಸಾಕ್ಷಿ ಎಂಬಂತೆ ಧನಂಜಯ್​ 7 ಹಾಗೂ ಮತ್ತು 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಗಮನ ಸೆಳೆದಿದ್ದರು.ಓದಿನಲ್ಲಿ ಸದಾ ಮುಂದಿದ್ದ ಧನಂಜಯ್​ ಅವರು ಬಾಲ್ಯದಿಂದಲೇ ನಾಟಕಗಳು, ಏಕಪಾತ್ರಾಭಿನಯ ಮತ್ತು ಬೀದಿ ನಾಟಕಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಅವರ ಈ ಕಲೆಗೆ ಮತ್ತಷ್ಟು ಸ್ಫೂರ್ತಿಯಾಗಿದ್ದು ವರನಟ ಡಾ. ರಾಜ್ ಕುಮಾರ್ ಸಿನಿಮಾಗಳು. ಅಣ್ಣಾವ್ರ ಸಿನಿಮಾಗಳನ್ನು ನೋಡಿ ಪ್ರಭಾವಿತರಾದ ಧನಂಜಯ್​ ತಾನೂ ಕೂಡ ಸಿನಿಮಾ ಹೀರೋ ಆಗಬೇಕೆಂಬ ಕನಸು ಕಂಡಿದ್ರಂತೆ.

ಆದರೆ ಧನಂಜಯ್​ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದು, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸುತ್ತಾರೆ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಇನ್ಫೋಸಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಕೂಡ ಸಿಕ್ಕಿತು. ಕೆಲ ತಿಂಗಳು ಇನ್ಫೋಸಿಸ್ ಉದ್ಯೋಗಿಯಾಗಿದ್ದ ಧನಂಜಯ್​ ಅವರಿಗೆ ಬಣ್ಣದ ಲೋಕದ ಗೀಳು ಬಿಡುವುದಿಲ್ಲ.

ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಜಿಪಿಐಇಆರ್ (GPIER) ಎಂಬ ಹವ್ಯಾಸಿ ನಾಟಕ ತಂಡ ಸೇರಿಕೊಳ್ತಾರೆ.ಸಾಕಷ್ಟು ನಾಟಕಗಳಲ್ಲಿನ ಅಭಿನಯಿಸುತ್ತಿದ್ದ ಧನಂಜಯ್​ ತಮ್ಮ ಪ್ರತಿಭೆಯಿಂದ ಹಿರಿಯ ರಂಗಾಯಣ ಕಲಾವಿದರಿಂದ ಮೆಚ್ಚುಗೆ ಗಳಿಸುತ್ತಾರೆ. ಒಮ್ಮೆ ನಾಟಕವೊಂದರಲ್ಲಿ ಧನಂಜಯ್​ ಅಭಿನಯ ಕಂಡು ನಿರ್ದೇಶಕ ಗುರುಪ್ರಸಾದ್ ಮೆಚ್ಚಿ, ತಮ್ಮ ಚಿತ್ರದಲ್ಲಿ ಹೀರೋ ಪಟ್ಟ ನೀಡುತ್ತಾರೆ. ಅದುವೇ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ. 2013ರಲ್ಲಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಧನಂಜಯ್​, ಈ ಚಿತ್ರದಲ್ಲಿನ ಉತ್ತಮ ನಟನೆಗಾಗಿ ಸೈಮಾ ಉದಯೋನ್ಮುಖ ಉತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow