ಐಪಿಎಲ್ ನಲ್ಲಿ ಫಿಕ್ಸಿಂಗ್ ಆರೋಪ: ನಾವೇನು ಮಾಡುತ್ತಿಲ್ಲ ಎಂದು ನಾಣ್ಯ ತೋರಿಸಿದ DC ಕ್ಯಾಪ್ಟನ್!

2025ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ನಿರ್ಧಾರವನ್ನು ಬಹಿರಂಗವಾಗಿ ತಿಳಿಸದೇ ಮ್ಯಾಚ್ ರೆಫರಿಯ ಕಿವಿಯಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಟಾಸ್ ಫಿಕ್ಸಿಂಗ್ ಆಗಿದೆ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು.
ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಕೆಲ ವಿಡಿಯೋಗಳಲ್ಲಿ ಐಪಿಎಲ್ ಟಾಸ್ ಕಾಯಿನ್ನ ಎರಡೂ ಭಾಗಗಳಲ್ಲಿ ಹೆಡ್ (H) ಚಿತ್ರಗಳಿರುವುದು ಸಹ ಕಂಡು ಬಂದಿತ್ತು. ಇದೇ ಕಾರಣದಿಂದಾಗಿ ಅಕ್ಷರ್ ಪಟೇಲ್ ಟಾಸ್ ಪ್ರಕ್ರಿಯೆಗೂ ಮುನ್ನ ಸಂಜು ಸ್ಯಾಮ್ಸನ್ಗೆ ನಾಣ್ಯದ ಎರಡೂ ಬದಿಗಳನ್ನು ತೋರಿಸಿರುವ ಸಾಧ್ಯತೆಯಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇದು ಉತ್ತಮ ನಡೆ ಎಂದು ಅನೇಕರು ಅಕ್ಷರ್ ಪಟೇಲ್ ಅವರನ್ನು ಪ್ರಶಂಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






