ಓಲಾ, ಉಬರ್ ಮಾದರಿಯಲ್ಲಿ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯ ಹೊಸ ಪ್ಲ್ಯಾನ್!
ಬೆಂಗಳೂರು:- ಓಲಾ, ಉಬರ್ ಮಾದರಿಯಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸಲು ಆರೋಗ್ಯ ಇಲಾಖೆ ಹೊಸ ಪ್ಲ್ಯಾನ್ ಗೆ ಮುಂದಾಗಿದೆ.
ಅದೆಷ್ಟೋ ರೋಗಿಗಳಿಗೆ ಆ್ಯಂಬುಲೆನ್ಸ್ ಸಿಗದೆ ಪರದಾಟ ನಡೆಸುವುದನ್ನ ನಾವು ನೋಡಿದ್ದೇವೆ. ನಾವು ಒಂದು ಆ್ಯಂಬುಲೆನ್ಸ್ ಸೇವೆ ಪಡೆಯಬೇಕು ಅಂದರೆ ಕೆಲವೊಮ್ಮೆ ವೇಟಿಂಗ್ ಲಿಸ್ಟ್‌ನಲ್ಲಿರಬೇಕಾಗುತ್ತೆ. ಇದರಿಂದ ತುರ್ತಾಗಿ ಆಸ್ಪತ್ರೆಗೆ ಹೋಗೋದಕ್ಕೆ ಸಾಧ್ಯವಾಗುದಿಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ಉಂಟಾಗಿ, ಅದೆಷ್ಟೋ ರೋಗಿಗಳು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ. ಇಂತಹ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುವುದಕ್ಕೆ ಆರೋಗ್ಯ ಇಲಾಖೆ ಹೊಸ ಯೋಜನೆ ಜಾರಿಗೆ ತರುತ್ತಿದೆ.
ಓಲಾ, ಉಬರ್, ರ‍್ಯಾಪಿಡೋ, ಆಟೋ, ಕ್ಯಾಬ್ಗಳನ್ನು ಬುಕ್ ಮಾಡುವ ಮಾದರಿಯಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 108 ಆ್ಯಂಬುಲೆನ್ಸ್ ಜವಾಬ್ದಾರಿಯನ್ನ ಸಂಪೂರ್ಣವಾಗಿ ಸರ್ಕಾರವೇ ನೋಡಿಕೊಳ್ಳುತ್ತಿದ್ದು, ಇದೀಗ ಆ್ಯಂಬುಲೆನ್ಸ್ ಸೇವೆಯನ್ನ ಮತ್ತಷ್ಟು ಸುಲಭವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?