ಕನ್ನಡದ “ಪದ್ಮಾವತಿ”ಗೆ ಕೂಡಿ ಬಂತು ಕಂಕಣಭಾಗ್ಯ..! ಹುಡುಗ ಯಾರು..?
ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ‘ಪದ್ಮಾವತಿ’ ಧಾರಾವಾಹಿಯು ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ. ಕಥೆ, ಅಭಿನಯ, ಭಾವನಾತ್ಮಕ ತೀವ್ರತೆ — ಎಲ್ಲದ್ರಲ್ಲೂ ಗೆದ್ದ ಈ ಧಾರಾವಾಹಿ ಹೊಸ ಪ್ರತಿಭೆಗಳನ್ನು ಪರಿಚಯಿಸಿತ್ತು. ತ್ರಿವಿಕ್ರಮ್ ಮತ್ತು ದೀಪ್ತಿ ಮನ್ನೆ ಅವರ ಜೋಡಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು.
ಧಾರಾವಾಹಿ ಮುಗಿದು ದಶಕ ಕಳೆದರೂ, ಈ ಜೋಡಿಯ ಹೆಸರು ಕೇಳಿದಾಗ ‘ಪದ್ಮಾವತಿ’ ನೆನಪಾಗುತ್ತದೆ. ಆದರೆ ಈಗ ಸುದ್ದಿ ಧಾರಾವಾಹಿ ಕುರಿತು ಅಲ್ಲ — ನಾಯಕಿ ಪಾತ್ರ ಮಾಡಿದ್ದ ದೀಪ್ತಿ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.
ಪದ್ಮಾವತಿ ನಂತರ ತೆಲುಗು ಕಿರುತೆರೆಯು ದೀಪ್ತಿಗೆ ತೆರೆದ ಬಾಗಿಲುಗಳಂತಾಯಿತು. ಅವರು ತೆಲುಗು ಇಂಡಸ್ಟ್ರಿಯಲ್ಲಿ ಸೆಟ್ಲ್ ಆಗಿ, ಪ್ರಸ್ತುತ ಜನಪ್ರಿಯ ‘ಜಗದಾದ್ರಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಖತ್ ರಗಡ್ ಹಾಗೂ ಬಲಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡು, ಜೀ ಕುಟುಂಬ ಅವಾರ್ಡ್‌ಗಳನ್ನು ಸತತವಾಗಿ ಗೆದ್ದಿದ್ದಾರೆ.
ಈ ಯಶಸ್ಸಿನ ಮಧ್ಯೆ ಈಗ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ ನಟಿ. ಇತ್ತೀಚೆಗೆ ವಿಶೇಷ ಫೋಟೋಶೂಟ್ ಮೂಲಕ ತಮ್ಮ ಭಾವಿ ಪತಿ ರೋಹನ್ ರೆಡ್ಡಿ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
"ಡಿಯರ್ ರೋಹನ್, ನಾನು ಕಾಯುತ್ತಿದ್ದ ವ್ಯಕ್ತಿ ನೀವು. ದೇವರು ಆಶೀರ್ವಾದಿಸಿದ ಸ್ವರ್ಗೀಯ ಉಡುಗೊರೆ ನೀವು. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ❤" — ಎಂದು ಫೋಟೋಗಳಿಗೆ ದೀಪ್ತಿ ಭಾವುಕ ಕ್ಯಾಪ್ಶನ್ ನೀಡಿದ್ದಾರೆ.
ಜೀ ತೆಲುಗು ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೂ ನವವಧು ದೀಪ್ತಿಗೆ ಸಹ ಕಲಾವಿದರು ಅರಶಿನ-ಕುಂಕುಮ ನೀಡಿ ಆಶೀರ್ವಾದಿಸಿದ್ದಾರೆ. “ರೋಹನ್, ಇದು ನನ್ನ ಇನ್ನೊಂದು ಕುಟುಂಬ. ಎಲ್ಲರನ್ನೂ ಇಲ್ಲಿಂದ ಪರಿಚಯಿಸುತ್ತಿದ್ದೇನೆ. ಐ ಲವ್ ಯೂ” ಎಂದು ನಾಚುತ್ತ ಹೇಳಿದ ಕ್ಷಣ ಪ್ರೇಕ್ಷಕರ ಮನ ಗೆದ್ದಿದೆ.
ನಿಮ್ಮ ಪ್ರತಿಕ್ರಿಯೆ ಏನು?