ರಶ್ಮಿಕಾ, ಸಲ್ಲು ಸಖತ್ ಡ್ಯಾನ್ಸ್! ಇಬ್ಬರ ಕೆಮಿಸ್ಟ್ರಿಗೆ ವೀಕ್ಷಕರಿಂದ ಸಿಕ್ತು ಫುಲ್ ಮಾರ್ಕ್ಸ್!

ಮಾರ್ಚ್ 5, 2025 - 20:10
 0  9
ರಶ್ಮಿಕಾ, ಸಲ್ಲು ಸಖತ್ ಡ್ಯಾನ್ಸ್! ಇಬ್ಬರ ಕೆಮಿಸ್ಟ್ರಿಗೆ ವೀಕ್ಷಕರಿಂದ ಸಿಕ್ತು ಫುಲ್ ಮಾರ್ಕ್ಸ್!

ನಟಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರದ ಕಲರ್ ಫುಲ್ ಸಾಂಗ್ ಬಿಡುಗಡೆ ಆಗಿದ್ದು, ಚೆಂದದ ಹಾಡಿಗೆ ಸಲ್ಮಾನ್ ಜೊತೆ ಮಸ್ತ್ ಆಗಿ ರಶ್ಮಿಕಾ ಕುಣಿದು ಕುಪ್ಪಳಿಸಿದ್ದಾರೆ

‘ಸಿಕಂದರ್’ ಚಿತ್ರದ ‘ಜೊಹ್ರಾ ಜಬೀನ್’ ಹಾಡು ರಿಲೀಸ್ ಆಗಿದೆ. ಸಲ್ಮಾನ್, ರಶ್ಮಿಕಾ ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಇಬ್ಬರೂ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ಕೂಡ ನೋಡುಗರಿಗೆ ಕಮಾಲ್ ಮಾಡ್ತಿದೆ.

ಇನ್ನೂ ಸಾಂಗ್ ವೀಕ್ಷಿಸಿದ ಕೆಲವರು ಮಗಳ ವಯಸ್ಸಿನ ನಟಿಯ ಜೊತೆ ಡ್ಯಾನ್ಸ್ ಮಾಡಿದ್ದೀರಾ ಎಂದು ಸಲ್ಮಾನ್‌ಗೆ ಟೀಕೆಗಳು ವ್ಯಕ್ತವಾಗಿದೆ. ಹಾಗಿದ್ದರೂ ಕೂಡ ಯೂಟ್ಯೂಬ್‌ನಲ್ಲಿ ಈ ಸಾಂಗ್ ಸಖತ್ ವಿವ್ಸ್ ಗಿಟ್ಟಿಸಿಕೊಂಡಿದೆ. ಇಬ್ಬರ ಕೆಮಿಸ್ಟ್ರಿ ಕಿಕ್‌ ಕೊಡುತ್ತಿದೆ. 

ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ಗೆ ಲಕ್ಕಿ ನಟಿ ರಶ್ಮಿಕಾ ಸಾಥ್ ನೀಡಿರೋದ್ರಿಂದ ಸಿನಿಮಾ ಗೆಲ್ಲಲಿದೆ ಎಂಬುದು ಸಿನಿಮಾ ಪ್ರೇಮಿಗಳ ಲೆಕ್ಕಾಚಾರವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow