ಕಮಲ ಕೊಳದ ಕೆಸರಲ್ಲಿ ಮಾತ್ರವಲ್ಲ, ನಿಮ್ಮ ಮನೆಯಲ್ಲೂ ಹೀಗೆ ಸುಲಭವಾಗಿ ಬೆಳೆಸಬಹುದು!

ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಯನ್ನು ಕಮಲ ಮತ್ತು ಕಮಲಾಸನ ಎಂದೂ ಕರೆಯುತ್ತಾರೆ, ಅಂದರೆ ಕಮಲದ ಮೇಲೆ ವಾಸಿಸುವವಳು. ಕಮಲದ ಹೂವಿನ ವಿಶೇಷವೆಂದರೆ ಅದು ನೀರಿನಲ್ಲಿ ಅರಳುವ ಸುಂದರ ಹೂವು. ಲಕ್ಷ್ಮಿ ಪೂಜೆ ಮಾಡುವಲ್ಲಿ ಕಮಲಾ ಹೂವಿಗೆ ವಿಶೇಷ ಸ್ಥಾನವಿದೆ. ಅಷ್ಟು ಮಾತ್ರವಲ್ಲ, ಕಮಲದ ಹೂವುಗಳಿಂದ ನಮ್ಮ ಜನ್ಮ ಜನ್ಮಾಂತರದ ಪಾಪಗಳನ್ನು, ದುಃಖಗಳನ್ನು ತೊಡೆದು ಹಾಕಬಹುದು. ಕಮಲದ ಹೂವುಗಳಿಂದ ಕೂಡ ನಮ್ಮ ಸಮಸ್ಯೆಗಳಿಗೆ ಪರಿಹಾರವಿದೆ.
ಅದಲ್ಲದೆ ಕೆಲವೊಂದು ಹೂವುಗಳು ಅಲಂಕಾರದ ದೃಷ್ಟಿಯಿಂದ ಮಾತ್ರವಲ್ಲ, ಆದಾಯದ ಮೂಲವೂ ಆಗಿರುತ್ತವೆ. ಇಂತಹ ಹತ್ತಾರು ಹೂವುಗಳಿವೆ. ಗುಲಾಬಿ, ಮಲ್ಲಿಗೆ ಚೆಂಡು ಹೂವು, ಸೇವಂತಿ, ಕನಕಾಂಬರ ಹೀಗೆ ಹತ್ತಾರು ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಜೊತೆಗೆ ಆದಾಯವೂ ಚೆನ್ನಾಗಿ ಸಿಗುತ್ತದೆ. ಇದರ ಸಾಲಿಗೆ ಕಮಲದ ಹೂವು ಸಹ ಸೇರಿಕೊಳ್ಳುತ್ತದೆ.
ಕಮಲದ ಹೂವನ್ನು ಅಲಂಕಾರಿಕ ಹೂವಾಗಿಯೇ ಹೆಚ್ಚಾಗಿ ಜನರು ಬಳಸುತ್ತಾರೆ. ಮನೆಯಲ್ಲಿ ಸಣ್ಣದಾದ ನೀರು ಕೊಳ ಮಾಡಿ ಅದರಲ್ಲಿ ಕಮಲದ ಹೂವು ಹಾಕಿ ಅದರಲ್ಲಿ ಹೂವು ಬಿಡುವುದು ನೋಡಿ ಸಂತೋಷ ಪಡುತ್ತಾರೆ. ಕೆಂಪು, ಬಿಳಿ ಕಮಲದ ಹೂವುಗಳು ಸಾಮಾನ್ಯವಾಗಿ ನೋಡುತ್ತೇವೆ. ಮನೆಯ ಗಾರ್ಡನ್ ಅಲಂಕಾರಕ್ಕೆ ಈ ಕಮಲದ ಹೂವುಗಳು ಸೂಕ್ತ ಆಯ್ಕೆ.
ಮೊದಲು ಮನೆಯಲ್ಲಿ ದೊಡ್ಡ ಪಾಟ್ಗಳು ಅಥವಾ ದೊಡ್ಡ ನೀರಿನ ಕೊಳಗಳ ನಿರ್ಮಿಸಬೇಕು. ನಂತರ ಅದರ ಒಳಗೆ ಮರಳು ಹಾಗೂ ಕಲ್ಲುಗಳನ್ನು ಹಾಕಬೇಕು. ಇನ್ನು ಕಮಲದ ಗಿಡಗಳು ನರ್ಸರಿಯಲ್ಲಿ ಇಲ್ಲವೆ ಕೃಷಿ ಇಲಾಖೆಯಲ್ಲಿ ಸಿಗುತ್ತವೆ ಅದನ್ನು ಈ ಕೊಳ ಅಥವಾ ಪಾಟ್ನಲ್ಲಿ ಹಾಕಿಡಬೇಖು. ನೀರು ತುಂಬಾ ಇರುವಂತೆ ನೋಡಿಕೊಳ್ಳಬೇಕು.
ಹಾಗೆ ನೀವು ಬೀಜಗಳನ್ನು ಸಹ ತಂದು ಗಿಡ ಮಾಡಬಹುದು. ಮೊದಲು ಪಾಟ್ನಲ್ಲಿ ಈ ಬೀಜಗಳ ಹಾಕಿ ಮೊಳಕೆ ಬಂದ ಬಳಿಕ ಕೊಳದಲ್ಲಿ ಹಾಕಬಹುದು. ಅದರಲ್ಲಿ 'ವಿಂಗ್ ಲೋಟಸ್' ಅಥವಾ 'ಕ್ಲಿಯರ್ ಮೂನ್ ಲೋಟಸ್' ಎಂಬ ಜಾತಿಯ ಕಮಲ ಬಹಳ ಬೇಗ ಹಾಗೂ ನೋಡಲು ಸುಂದರವಾಗಿ ಕಾಣಿಸುತ್ತವೆ. ಒಮ್ಮೆ ಕಮಲದ ಹೂವುಗಳು ಬಿಡಲು ಆರಂಭಿಸಿದರೆ ನಿರಂತರವಾಗಿ ನೀವು ಹೂವು ಹಾಗೂ ಬೀಜಗಳನ್ನು ಪಡೆಯಬಹುದು.
ನೀವು ಕಮಲದ ಹೂವು ಬೆಳೆಯಲು ದೊಡ್ಡ ಪಾಟ್ ಬಳಸಬೇಕು. ಸುಮಾರು 18 ಇಂಚು ಅಗಲವಾದರೂ 8 ಇಂಚು ಆಳವಾದರು ಇರಬೇಕು. ಹೀಗಿದ್ದಾಗ ಮಾತ್ರ ಬಹಳ ಚೆನ್ನಾಗಿ ಕಮಲದ ಹೂವು ಬಿಡುತ್ತದೆ. ಮಡಕೆಯೊಳಗೆ ಕಮಲವನ್ನು ಬೆಳೆಸುವ ಬಗ್ಗೆ ಯೋಚಿಸುವಾಗ, ಎಲೆಗಳು ಹರಡಿರುವ ಎಲೆಗಳನ್ನು ಬೆಂಬಲಿಸುವಷ್ಟು ಅಗಲವಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಅಗಲವಾದ, ಆಳವಿಲ್ಲದ ಮಡಕೆಯನ್ನು ಕನಿಷ್ಠ 18 ಇಂಚು ಅಗಲ ಮತ್ತು 8 ಇಂಚು ಆಳವನ್ನು ಬಳಸಿ ಇದರಿಂದ ಬೇರುಗಳು ಹರಡಬಹುದು. ಈ ಕಮಲದ ಹೂವಿನ ಗಿಡಗಳಿಗೆ ರಾಸಾಯನಿಕ ಗೊಬ್ಬರಕ್ಕಿಂತಲೂ ಸಾವಯವ ಗೊಬ್ಬರ ಹಾಕುವುದು ಉತ್ತಮ. ಕಮಲದ ಗಡ್ಡೆಯನ್ನು ಆಳವಾಗಿ ಪಾಟ್ನಲ್ಲಿ ಊರಿರಬೇಕು. ಅದು ಹೊರಬಂದರೆ ಬೇಗ ಈ ಗಿಡ ಸಾಯುತ್ತದೆ. ಹಾಗಾಗಿ ಕಮಲದ ಗಡ್ಡೆಗಳು ಆಳವಾಗಿ ಮಣ್ಣಿನಲ್ಲಿ ಹೂಳಬೇಕು.
ನಿಮ್ಮ ಪ್ರತಿಕ್ರಿಯೆ ಏನು?






