ಕರ್ನೂಲ್ ಬಸ್ ದುರಂತ: ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ 22 ವರ್ಷದ ಟೆಕ್ಕಿ ಸಾವು!
ಆಂಧ್ರಪ್ರದೇಶ: ದೀಪಾವಳಿ ಸಂಭ್ರಮ ಮುಗಿಸಿ ಭಾರದ ಮನಸಿನಿಂದ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಕಾವೇರಿ ಟ್ರಾವೆಲ್ಸ್ನ ಎಸಿ ಬಸ್ನಲ್ಲಿ ಹೊರಟ್ಟಿದ್ದ ಅನೇಕ ಮಂದಿಗೆ ಸಾವು ತಮ್ಮ ಮಗ್ಗುಲಲ್ಲೇ ಪಯಣಿಸುತ್ತಿದೆ ಎಂಬ ಸುಳಿವೆ ಇಲ್ಲದಂತೆ ಮಲಗಿದ್ದರು. ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ನಸುಕಿನ ಜಾವ ಬಸ್ ಅಗ್ನಿ ಅನಾಹುತಕ್ಕೆ ಇಡಾಗಿತ್ತು. ಇದರಲ್ಲಿ ಅದೃಷ್ಟ ಎಂಬಂತೆ 12 ಮಂದಿ ಕಿಟಕಿ ಗಾಜು ಒಡೆದು ಪಾರಾಗಿದ್ದಾರೆ. ಆದರೆ 20 ಮಂದಿ ಸಜೀವ ದಹನಗೊಂಡಿದ್ದಾರೆ.
ಅದರಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿ ಅನುಷಾ ಕೂಡ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯಾದಾದ್ರಿಯ ನಿವಾಸಿಯಾಗಿದ್ದ ಅನುಷಾ, ದೀಪಾವಳಿ ಹಬ್ಬಕ್ಕಾಗಿ ತಮ್ಮ ಊರಿಗೆ ಹೋಗಲು ಹೈದರಾಬಾದ್‌ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ.
ಇದಲ್ಲದೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಅನೇಕ ಮಂದಿ ಸಾವನ್ನಪ್ಪಿದ್ದು, ಅನೇಕ ಕನಸುಗಳು ಭಸ್ಮವಾಗಿವೆ. ಆಂಧ್ರದ ನೆಲ್ಲೂರು ಮೂಲದವರಾದ ರಮೇಶ್, ಅವರ ಪತ್ನಿ ಅನೂಷಾ, ಹಾಗೂ ಮಕ್ಕಳು ಶಶಾಂಕ್ ಮತ್ತು ಮನ್ವಿತಾ ಈ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?