ಶಬರಿಮಲೆಯಲ್ಲಿ ಕಳವಾದ ಚಿನ್ನಕ್ಕೂ ಬಳ್ಳಾರಿಗೂ ಲಿಂಕ್! SIT ದಾಳಿ
ಶಬರಿಮಲೆ ಅಯ್ಯಪ್ಪ ದೇವಾಲಯದ 4 ಕೆಜಿ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಎಸ್‌ಐಟಿ ತನಿಖೆ ತೀವ್ರಗೊಂಡಿದೆ. ತನಿಖೆಯ ಅಂಗವಾಗಿ ತಂಡವು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯ ಮೇಲೆ ದಾಳಿ ನಡೆಸಿದೆ.
ಚಿನ್ನ ಖರೀದಿಸಿದ್ದಾಗಿ ವ್ಯಾಪಾರಿ ಒಪ್ಪಿಗೆ
ದಾಳಿಯ ವೇಳೆ ಚಿನ್ನದಂಗಡಿ ಮಾಲೀಕ ಗೋವರ್ಧನ್ 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. “ಅದು ಶಬರಿಮಲೆಯ ಕಳ್ಳತನವಾದ ಚಿನ್ನ ಎಂದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖರೀದಿ ಮಾಡುತ್ತಿದ್ದೇನಲ್ಲ,” ಎಂದು ಗೋವರ್ಧನ್ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಮುಂದಿನ ತನಿಖೆಗೆ ಅಗತ್ಯವಿದ್ದರೆ ಹಾಜರಾಗುವಂತೆ ಸೂಚಿಸಿದ್ದಾರೆ.
ಮುಖ್ಯ ಆರೋಪಿ ಉನ್ನಿಕೃಷ್ಣನ್ ಕೇರಳ ಪೊಲೀಸ್ ವಶದಲ್ಲಿ
ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪ ಎದುರಿಸುತ್ತಿರುವ ಪೋಟಿ ಉನ್ನಿಕೃಷ್ಣನ್ ಪ್ರಸ್ತುತ ಕೇರಳ ಎಸ್‌ಐಟಿ ವಶದಲ್ಲಿದ್ದಾರೆ.
ಬಳ್ಳಾರಿ–ಬೆಂಗಳೂರು ಶೋಧ ಮುಂದುವರಿಕೆ
ಉನ್ನಿಕೃಷ್ಣನ್ ಕಳುವಾದ ಚಿನ್ನವನ್ನು ಬಳ್ಳಾರಿಯ ವ್ಯಾಪಾರಿ ಗೋವರ್ಧನ್‌ಗೆ ಮಾರಾಟ ಮಾಡಿದ ಆರೋಪದ ತನಿಖೆ ನಡೆಯುತ್ತಿದ್ದು, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಎಸ್‌ಐಟಿ ತಂಡದ ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ.
ನಿಮ್ಮ ಪ್ರತಿಕ್ರಿಯೆ ಏನು?