ಕಾಲೇಜು ಹುಡುಗಿಯರೇ ಇಲ್ಲಿ ಕೇಳ್ರಮ್ಮ: ಮಗುಗೆ ಜನ್ಮ ಕೊಟ್ರೆ ನಿಮಗೆ ಕೊಡ್ತಾರಂತೆ 80 ಸಾವಿರ!

ಜನವರಿ 15, 2025 - 22:00
 0  8
ಕಾಲೇಜು ಹುಡುಗಿಯರೇ ಇಲ್ಲಿ ಕೇಳ್ರಮ್ಮ: ಮಗುಗೆ ಜನ್ಮ ಕೊಟ್ರೆ ನಿಮಗೆ ಕೊಡ್ತಾರಂತೆ 80 ಸಾವಿರ!

ಕೆಲವು ದೇಶಗಳಲ್ಲಿ ಜನನ ಪ್ರಮಾಣವು ಸಂಪೂರ್ಣವಾಗಿ ಕುಸಿದಿದೆ. ಇದರಿಂದಾಗಿ ಆಯಾ ಸರಕಾರಗಳು ದಂಪತಿಗಳಿಗೆ ಅದ್ಭುತ ಕೊಡುಗೆಗಳನ್ನು ನೀಡುತ್ತಿವೆ. ಅಷ್ಟೇ ಅಲ್ಲ ಆ ದೇಶಗಳ ಉದ್ಯೋಗಿಗಳಿಗೆ ಒಳ್ಳೆಯ ಬಂಪರ್ ಆಫರ್ ಗಳನ್ನೂ ನೀಡುತ್ತಿದ್ದಾರೆ. ಇತ್ತೀಚೆಗೆ ಚೀನಾ ಕೂಡ ಇದೇ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿದೆ. 

ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭಾರತವು ತೊಂದರೆಗೀಡಾಗಿದೆ, ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದು ದೇಶದ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದೆ. ಇದೀಗ ದೇಶವೊಂದ ಮಕ್ಕಳನ್ನು ಹುಟ್ಟು ಹಾಕಲು ವಿಚಿತ್ರ ಯೋಜನೆ ರೂಪಿಸಿದೆ...

ರಷ್ಯಾದ ಕರೇಲಿಯಾದಲ್ಲಿನ ಸ್ಥಳೀಯ ಆಡಳಿತವು ಮಕ್ಕಳನ್ನು ಹೆರಲು ಕಾಲೇಜ್‌ ಯುವತಿಯರಿಗೆ ಹಣವನ್ನು ನೀಡುವುದಾಗಿ ಘೋಷಿಸಿದೆ. ಇಲ್ಲಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಲೇಜು ಮತ್ತು ವಿಶ್ವವಿದ್ಯಾಲಯದ ಹುಡುಗಿಯರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದರೆ 100,000 ರೂಬಲ್‌ಗಳನ್ನು ನೀಡಲಾಗುತ್ತದೆ. 

 ರಷ್ಯಾ ಜನನ ಪ್ರಮಾಣ ಕುಸಿಯುತ್ತಿರುವುದನ್ನು ಸುಧಾರಿಸಲು ಈ ನೀತಿಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಜನವರಿ 1 ರಿಂದ ಜಾರಿಗೆ ಬಂದಿದೆ. ಮಗು ಸತ್ತರೆ ಯೋಜನೆಯಲ್ಲಿ ನಮೂದಿಸಿದ ಹಣ ಹೆಣ್ಣು ಮಗುವಿಗೆ ಹಣ ಸಿಗುವುದಿಲ್ಲ ಎಂದು ತಿಳಿಸಿದೆ..

ಮಗು ಹುಟ್ಟಿದ ನಂತರ ಹಠಾತ್ತನೆ ಸತ್ತರೆ ? ಮಗುವು ಅಂಗವೈಕಲ್ಯದಿಂದ ಜನಿಸಿದರೆ ಏನು..? ಎಂಬ ಹಲವು ಪ್ರಶ್ನೆಗಳಿದ್ದು, ಇನ್ನೂ ಗೊಂದಲಗಳಿವೆ. ಜನನ ಪ್ರಮಾಣವನ್ನು ಹೆಚ್ಚಿಸಲು ರಷ್ಯಾದಲ್ಲಿ ಇಂತಹ ಅನೇಕ ಇತರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಕೆಲ ತಜ್ಞರು ಇದು ಸರಿಯಾದ ವಿಧಾನವಲ್ಲ ಅಂತ ವಿರೋಧ ವ್ಯಕ್ತಪಡಿಸುತ್ತಿದ್ದಾರೆ..

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow