ಕಾಲೇಜ್ ಹುಡುಗಿಯರನ್ನಿಟ್ಟುಕೊಂಡು ದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ನಾಲ್ವರು ಅರೆಸ್ಟ್!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ನಿಡ್ಡೋಡಿ ಪ್ರದೇಶದಲ್ಲಿ, ಅಪ್ರಾಪ್ತ ಕಾಲೇಜು ಹುಡುಗಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಮೂಡಬಿದಿರೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಆಟೋ ಚಾಲಕ ಮಹೇಶ್, ಕಟೀಲು ನಿವಾಸಿ ಶ್ರೀಕಾಂತ್, ಯಜ್ಞೇಶ್ ಮತ್ತು ದಿಲೀಪ್ ಬಂಧಿತರಾಗಿದ್ದು, ಇಬ್ಬರು ಅಪ್ರಾಪ್ತೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಮೂಡಬಿದಿರೆಯ ನಿಡ್ಡೋಡಿ ನಿವಾಸಿ ಆಟೋ ಚಾಲಕ, ಬಂಧಿತ ಮಹೇಶ್, ಇಬ್ಬರು ಅಪ್ರಾಪ್ತ ಕಾಲೇಜ್ ಬಾಲಕಿಯರನ್ನು ಪುಸಲಾಯಿಸಿ ಕರೆತಂದಿದ್ದ. ಇದೇ ವೇಳೆ ತನ್ನ ಸ್ನೇಹಿತರನ್ನು ಮನೆಗೆ ಕರೆಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮೂಡಬಿದಿರೆ ಪೊಲೀಸರು ಇಬ್ಬರು ಅಪ್ರಾಪ್ತೆಯರ ರಕ್ಷಣೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?