ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಇಲ್ಲಿ ಕೇಳಿ, ಬಳ್ಳಾರಿಯಲ್ಲಿದೆ ಸ್ಟಾಫ್ ನರ್ಸ್ ಉದ್ಯೋಗ; ಬೇಗ ಅಪ್ಲೈ ಮಾಡಿ!

ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕೂತಿದ್ದೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು. ಬಳ್ಳಾರಿಯಲ್ಲಿ ಖಾಲಿ ಇರುವ ಸ್ಟಾಫ್ ನರ್ಸ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎಂಎಂ ಅಭೀಮ್ ಕಾರ್ಯಕ್ರಮದ ಅಡಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಆಸಕ್ತರು ಕೂಡಲೇ ಅಪ್ಲೈ ಮಾಡಿ.
ಒಟ್ಟು 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬ್ಲಾಕ್ ಎಪಿಡೆಮಿಲೊಜಿಸ್ಟ್ - 1ಸ್ಟಾಫ್ ನರ್ಸ್ - 45ಆಡಿಯೋಮೆಟ್ರಿಲ್ ಅಸಿಸ್ಟೆಂಟ್ - 1ಇನ್ಸ್ಟ್ರಕ್ಟರ್- 1ಡಿಸ್ಟಿಕ್ ಕೋ ಆರ್ಡಿನೇಟರ್ - 1ಜೂನಿಯರ್ ಹೆಲ್ತ್ ಅಸಿಸ್ಟೆಂಟ್ - 12ಕ್ಲೋಸ್ ಅಡ್ವೈಸರ್ - 1
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಪದವಿ, ಎಎಸ್ಸಿ, ಬಿಎಸ್ಸಿ ನರ್ಸಿಂಗ್, ಡಿಪ್ಲೊಮಾಮ ಬಿಎಸ್ಸಿ, ಬಿಡಿಎಸ್, ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಹುದ್ದೆಗೆ ಅನುಗುಣವಾದ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45 ವರ್ಷವಾಗಿದೆ.
ಆಯ್ಕೆ:ಅಭ್ಯರ್ಥಿಗಳನ್ನು ಮೆರಿಟ್, ದಾಖಲಾತಿ ಪರಿಶೀಲನೆ ಮೇರೆಗೆ ಆಯ್ಕೆ ಮಾಡಲಾಗುವುದು.ಈ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 4 ರಂದು ಈ ಕೆಳಗಿನ ವಿಳಾಸದಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






