ಕೈತುಂಬಾ ಸಂಬಳ ಸಿಗುವ ಉದ್ಯೋಗ ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿದೆ ಅವಕಾಶ, ಪರೀಕ್ಷೆ ಇಲ್ಲದೇ Join ಆಗಿ!

ಎಪ್ರಿಲ್ 24, 2025 - 08:31
 0  11
ಕೈತುಂಬಾ ಸಂಬಳ ಸಿಗುವ ಉದ್ಯೋಗ ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿದೆ ಅವಕಾಶ, ಪರೀಕ್ಷೆ ಇಲ್ಲದೇ Join ಆಗಿ!

ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಹಾಗಿದ್ರೆ ನೀವು ಇಲ್ಲಿ ಪರೀಕ್ಷೆ ಇಲ್ಲದೇ ಉದ್ಯೋಗ ಪಡೆಯಬಹುದು. 

ಹೌದು, ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ  ಭರ್ಜರಿ ಉದ್ಯೋಗ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಸೂಕ್ತ ದಾಖಲಾತಿಗಳ ಜೊತೆಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.

ಆಸಕ್ತರು ಏಪ್ರಿಲ್ 25ರೊಳಗೆ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಬಹುದು. 

ನೇಮಕಾತಿ ಸಂಸ್ಥೆ: ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ 

ಹುದ್ದೆಗಳು: ವ್ಯವಸ್ಥಾಪಕ, ಸಹಾಯಕ ವ್ಯವಸ್ಥಪಾಕ, ಇತರೆ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ಕೊನೆ ದಿನಾಂಖ: ಏಪ್ರಿಲ್ 25

ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 55

ಮಾಸಿಕ ವೇತನ: 67000 ರೂಪಾಯಿ.

ವಿದ್ಯಾರ್ಹತೆ ಮಾಹಿತಿ
ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ  ಹುದ್ದೆಗಳನ್ನು ಸೇರಬಯಸುವವರು ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪದವಿ, ಬಿಎಸ್‌ಸಿ, ಬಿಟೆಕ್ ಅಥವಾ ಬಿಐ ಪದವಿ ಪಡೆದಿರಬೇಕು.

ವಯೋಮಿತಿ
IRCTC ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ವಯಸ್ಸಾಗಿರಬೇಕು. ಈಗಾಗಲೇ ಬೇರೆ ಬೇರೆ ರಂಗದಲ್ಲಿ ಕೆಲಸ ಮಾಡಿದ ಅರ್ಹರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಆಯಾ ಜಾತಿ ಅಭ್ಯರ್ಥಿಗಳಿಗೆ ಒಂದಷ್ಟು ಸಡಿಲಿಕೆ ಸಿಗಲಿದೆ.

ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ. ಬದಲಾಗಿ ಅರ್ಜಿ ಸಲ್ಲಿಸಿದವರ ಅರ್ಹತೆಯನ್ನು ಮತ್ತು ದಾಖಲೆಗಳ ಪರಿಶೀಲನೆ, ಸಂದರ್ಶನ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದಾಖಲಾತಿ ಪರಿಶೀಲನೆ ವೇಳೆ ಒಂದು ಪಟ್ಟಿ ಸಿದ್ದಪಡಿಸಲಾಗುತ್ತದೆ. ಇದರಲ್ಲಿ ಆಯ್ಕೆ ಆದವರಿಗೆ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ

ಆಸಕ್ತ ಅಭ್ಯರ್ಥಿಗಳು ಕೂಡಲೇ ನೀವು IRCTC ಯ ಅಧಿಕೃತ ವೆಬ್‌ಸೈಟ್ https://irctc.com/ ಗೆ ಭೇಟಿ ನೀಡಬೇಕು. ಅಲ್ಲಿ ಕೊಡಲಾದ ಮಾಹಿತಿ ಸರಿಯಾಗಿ ಓದಿಕೊಂಡು, ಸೂಕ್ತ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 25 ರ ಕೊನೆಯ ದಿನದವರೆಗೆ ಕಾಯದೇ ಇಂದೇ ಅರ್ಜಿ ಸಲ್ಲಿಸಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow