ಫಿಕ್ಸಿಂಗ್​ ಆರೋಪ​: ಬ್ಯಾನ್ ಆಗಿದ್ದ ತಂಡದ ಮೇಲೆ ಮತ್ತೆ ಮೂಡಿದ ಗುಮಾನಿ!

ಎಪ್ರಿಲ್ 24, 2025 - 09:06
 0  15
ಫಿಕ್ಸಿಂಗ್​ ಆರೋಪ​: ಬ್ಯಾನ್ ಆಗಿದ್ದ ತಂಡದ ಮೇಲೆ ಮತ್ತೆ ಮೂಡಿದ ಗುಮಾನಿ!

ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಪೆಂಡಭೂತದ ಸುದ್ದಿ ಸದ್ದು ಮಾಡ್ತಿದೆ. ಈ ಹಿಂದೆ ಫಿಕ್ಸಿಂಗ್​ ಕಾರಣಕ್ಕೆ 2 ವರ್ಷಗಳ ಕಾಲ ಬ್ಯಾನ್​ ಆಗಿದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಸೀಸನ್​ ಕಳಪೆ ಆಟವಾಡ್ತಿರೋ ರಾಜಸ್ಥಾನ ತಂಡ ಕಳೆದ 4 ಪಂದ್ಯಗಳಲ್ಲಿ ಸತತವಾಗಿ ಸೋತಿದೆ. ಅದ್ರಲ್ಲೂ ಕಳೆದ 2 ಪಂದ್ಯಗಳಲ್ಲಿ ಸುಲಭಕ್ಕೆ ಗೆಲ್ಲಬಹುದಾಗಿದ್ದ ಪಂದ್ಯಗಳನ್ನ ಕೈಚೆಲ್ಲಿದೆ. ಇದ್ರ ಬೆನ್ನಲ್ಲೇ ಫಿಕ್ಸಿಂಗ್​​ ಆರೋಪ ಕೇಳಿ ಬಂದಿದೆ.

ಎಸ್, IPL ಟೂರ್ನಿ ರೋಚಕ ಘಟ್ಟ ತಲುಪಿದ ಬೆನ್ನಲ್ಲೇ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಮ್ಯಾಚ್​​ ಫಿಕ್ಸಿಂಗ್​ ಪೆಡಂಭೂತದ ಗಂಭೀರವಾದ ಆರೋಪ ಐಪಿಎಲ್​ ಲೋಕವನ್ನ ಶೇಕ್​ ಮಾಡಿದೆ.

ಏಪ್ರಿಲ್​ 19ರಂದು ರಾಜಸ್ಥಾನ್​ ರಾಯಲ್ಸ್​ ತಂಡ ಲಕ್ನೋ ಸೂಪರ್​ ಜೈಂಟ್​ ವಿರುದ್ಧ ಹೋಮ್​ಗ್ರೌಂಡ್​​ ಜೈಪುರದಲ್ಲಿ ಪಂದ್ಯವಾಡ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಲಕ್ನೋ 180 ರನ್​ಗಳಿಸಿತ್ತು. 181 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ರಾಜಸ್ಥಾನ್​ ತಂಡಕ್ಕೆ ಕೊನೆಯ ಓವರ್​​ನಲ್ಲಿ 9 ರನ್​ ಬೇಕಿದ್ವು. ದೃವ್​​ ಜುರೇಲ್​, ಶಿಮ್ರಾನ್​ ಹೆಟ್ಮೆಯರ್​ರಂತ ಕ್ರಿಸ್​ನಲ್ಲಿದ್ರು. ಹೆಟ್ಮೆಯರ್​ ಔಟಾದ ಮೇಲೆ ಶುಭಮ್​ ದುಬೆ ಬ್ಯಾಟಿಂಗ್​ಗೆ ಬಂದ್ರು. ಪ್ರಮುಖ ಆಟಗಾರರು ಬ್ಯಾಟಿಂಗ್​ಗೆ ಬಂದ್ರೂ 2 ರನ್​ಗಳಿಂದ ರಾಜಸ್ಥಾನ್​ ಸೋಲ್ತು. ಈ ನಾಟಕೀಯ ಸೋಲಿಗೆ ಫಿಕ್ಸಿಂಗ್​ ಕಾರಣ ಎಂಬ ಆರೋಪ ಕೇಳಿಬಂದಿದೆ.

ರಾಜಸ್ಥಾನ್​ ಕ್ರಿಕೆಟ್​ ಅಸೋಸಿಯೇಶನ್​ನ ಅಧಿಕಾರಿಯೇ ಈ ಸೋಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್​ ರಾಯಲ್ಸ್​ ಮ್ಯಾನೇಜ್​ಮೆಂಟ್​ ಮೇಲೆ ಆರ್​​ಸಿಎನ ಆ್ಯಡ್​ ಹಾಕ್​ ಕಮಿಟಿ ಸದಸ್ಯ ಜೈದೀಪ್​ ಬಿಹಾನಿ ಆರೋಪ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow