ದೊಡ್ಡಬಳ್ಳಾಪುರ: ಬಾಡಿಗೆ ಕೊಟ್ಟ ಮಾಲೀಕನ ಮನೆಯಲ್ಲಿ ಕನ್ನ ಹಾಕಿದ ಕಳ್ಳಿ!

ಬೆಂಗಳೂರು ಗ್ರಾಮಾಂತರ:- ಕಳ್ಳಿಯೋರ್ವಳು ಬಾಡಿಗೆ ಕೊಟ್ಟ ಮನೆ ಮಾಲೀಕನ ಮನೆಗೆ ಕನ್ನ ಹಾಕಿರುವ ಘಟನೆ ದೊಡ್ಡಬಳ್ಳಾಪುರದ ಪಾಲನಜೋಗನಹಳ್ಳಿಯಲ್ಲಿ ಜರುಗಿದೆ. ಮಮತಾ(25) ಅವರು, ಮಾಲೀಕ ಮುನಿಸ್ವಾಮಿ (75) ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.
ಮನೆಯ ಕೀ ಯನ್ನು ಕಿಟಕಿಯಲ್ಲಿ ಇಟ್ಟು ಹೋಗಿದ್ದನ್ನು ಕಳ್ಳಿ ಗಮನಿಸಿದ್ದಾರೆ. ವೃದ್ಧ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮಮತಾ ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಬೀರುವಿನಲ್ಲಿದ್ದ 92 ಗ್ರಾಂ ನ ಚಿನ್ನದ ಚೈನ್, ಬ್ರಸ್ ಲೈಟ್, ಓಲೆ, ಬಳೆ ಉಂಗುರ ಕಳ್ಳತನವಾಗಿದೆ. ಕಳ್ಳತನ ಮಾಡಿದ ಒಡವೆಗಳನ್ನು ಮಮತಾ ಖಾಸಗಿ ಬ್ಯಾಂಕ್ ನಲ್ಲಿಟ್ಟಿದ್ದ. ಆರೋಪಿಯಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನವನ್ನು ಮತ್ತೆ ವಾಪಸ್ ಮಾಲೀಕರಿಗೆ ಇನ್ಸ್ಪೆಕ್ಟರ್ ಸಾಧಿಕಗ ಪಾಷಾ ಅವರು ಕೊಟ್ಟಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






