ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಐಪಿಎಲ್ 2026 ರ ಮಿನಿ ಹರಾಜಿಗೆ ದಿನಾಂಕ ನಿಗದಿ

ಅಕ್ಟೋಬರ್ 11, 2025 - 09:00
 0  11
ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಐಪಿಎಲ್ 2026 ರ ಮಿನಿ ಹರಾಜಿಗೆ ದಿನಾಂಕ ನಿಗದಿ

ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ 2026ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 13-15 ರ ನಡುವೆ ನಡೆಯುವ ಸಾಧ್ಯತೆಯಿದೆ. 

ಐಪಿಎಲ್ 2026 ರ ಮಿನಿ ಹರಾಜು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜು ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಬಹುದು. ಡಿಸೆಂಬರ್ 13 ಮತ್ತು 15 ರ ನಡುವೆ ಹರಾಜು ನಡೆಯುವ ಸಾಧ್ಯತೆಯಿದೆ. ಹೀಗಾಗಿ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ತಂಡದಿಂದ ಬಿಡುಗಡೆ ಮಾಡಲು ನವೆಂಬರ್ 15 ರವರೆಗೆ ಸಮಯಾವಕಾಶವಿರಲಿದೆ.

ಮುಂದಿನ ಐಪಿಎಲ್ ಮಿನಿ ಹರಾಜು ಎಲ್ಲಿ ನಡೆಯುತ್ತದೆ?. ಕ್ರಿಕ್‌ಬಜ್ ಪ್ರಕಾರ, ಕಳೆದ ಎರಡು ಆವೃತ್ತಿಗಳಂತೆ ಮಿನಿ ಹರಾಜು ಭಾರತದಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತದೆಯೇ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. ಐಪಿಎಲ್ 2023 ರ ಹರಾಜು ದುಬೈನಲ್ಲಿ ನಡೆದಿತ್ತು. ಹಾಗೆಯೇ 2024 ರ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಫ್ರಾಂಚೈಸಿಗಳಿಗೆ ಹತ್ತಿರವಿರುವ ಮೂಲಗಳನ್ನು ಉಲ್ಲೇಖಿಸಿ, ಬಿಸಿಸಿಐ ಈ ಬಾರಿ ಭಾರತದಲ್ಲಿ ಮಿನಿ-ಹರಾಜನ್ನು ನಡೆಸಿದರೆ ಆಶ್ಚರ್ಯವೇನಿಲ್ಲ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ಬಗ್ಗೆ ನಿರ್ಧಾರ ಇನ್ನೂ ಬಾಕಿ ಇದೆ.

ಐಪಿಎಲ್ 2026 ರ ಮಿನಿ ಹರಾಜಿನ ಮೊದಲು ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನಾಂಕವಾಗಿ ನವೆಂಬರ್ 15 ಅನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಈ ದಿನಾಂಕದೊಳಗೆ ತಾವು ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ವರದಿಗಳ ಪ್ರಕಾರ, ಚೆನ್ನೈ ಮತ್ತು ರಾಜಸ್ಥಾನ ಹೊರತುಪಡಿಸಿ, ಉಳಿದ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow