ಗೋಬಿ.. ಪಾನಿಪುರಿ..ಕಬಾಬ್ ಆಯ್ತು.. ಈಗ ಗ್ರೀನ್ ಬಟಾಣಿ..! ಬ್ಯಾನ್ ಆಗುತ್ತಾ ಹಸಿರು ಬಟಾಣಿ? ಕ್ಯಾನ್ಸರ್'ಕಾರಕ ಅಂಶ ಪತ್ತೆ

ಫೆಬ್ರವರಿ 28, 2025 - 12:04
 0  18
ಗೋಬಿ.. ಪಾನಿಪುರಿ..ಕಬಾಬ್ ಆಯ್ತು.. ಈಗ ಗ್ರೀನ್ ಬಟಾಣಿ..! ಬ್ಯಾನ್ ಆಗುತ್ತಾ ಹಸಿರು ಬಟಾಣಿ? ಕ್ಯಾನ್ಸರ್'ಕಾರಕ ಅಂಶ ಪತ್ತೆ

ಬೆಂಗಳೂರು: ಗೋಬಿ ಆಯ್ತು, ಪಾನಿಪುರಿ ಆಯ್ತು, ಕಬಾಬ್ ಆಯ್ತು.. ಕಾಟನ್ ಕ್ಯಾಂಡಿನೂ ಆಯ್ತು.. ಇದೀಗ ಬಟಾಣಿ ಸರದಿ. ಕೂರ್ಮಾ ಆಗಲಿ, ಯಾವುದೇ ತಿಂಡಿ ಮಾಡುವಾಗಲು ಬಟಾಣಿ ಬಳಸುತ್ತಾರೆ. ಬಡವರ ಫೆವರೇಟ್ ಬಟಾಣಿಗೆ ಇದೀಗ ಬ್ಯಾನ್ ಬಿಸಿ ತಟ್ಟುತ್ತಾ ಅನ್ನೋ ಪ್ರಶ್ನೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ? ಹಾಗಿದ್ರೆ ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣ ಇಲ್ಲಿದೆ ನೋಡಿ.

ಹಸಿರು ಬಟಾಣಿ ಕೂಡ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 28 ಕ್ಕೂ ಹೆಚ್ಚು ಹಸಿರು ಬಟಾಣಿ ಮಾದರಿಗಳು ಅಸುರಕ್ಷಿತ ಎಂಬ ವಿಚಾರ ತಿಳಿದುಬಂದಿದೆ.

ಬಟಾಣಿ ಆರೋಗ್ಯಕ್ಕೆ ಮಾರಕ?

ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದೆ. ಕಲರ್ ಬಳಕೆಯಿಂದ ಬಟಾಣಿ ಸಾಮಾನ್ಯಕ್ಕಿಂತ ಹೆಚ್ಚು ಹಸಿರಾಗಿ ಕಾಣುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಬಟಾಣಿಯಲ್ಲಿ ಬಣ್ಣ ಬಳಕೆ ಮಾಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಬಟಾಣಿಯ ಬಣ್ಣ ಕಿಡ್ನಿಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಟ ಮಾಡುವ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow