ಚಂದ್ರಗ್ರಹಣದ ನಂತರ ಬಾಗಿಲು ಓಪನ್: ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪೂಜೆ!
ಬೆಂಗಳೂರು ಗ್ರಾಮಾಂತರ :- ರಕ್ತ ಚಂದ್ರಗ್ರಹಣ ಮುಕ್ತಾಯ ಆಗಿದ್ದು, ಮುಚ್ಚಿದ್ದ ದೇವಾಲಯಗಳು ತೆರೆದಿವೆ.
ಚಂದ್ರಗ್ರಹಣದ ನಂತರ ದೇವಾಲಯಗಳ ಬಾಗಿಲು ತೆರೆಯಲಾಗಿದೆ. ದೇವಾಲಯಗಳ ಶುದ್ದಿಕರಣ ನಂತರ ದೇವಾಲಯಗಳು ಓಪನ್ ಆಗಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪ್ರಾತಕಾಲದ ಪೂಜೆ ನಡೆದಿದೆ. ದೇವಾಲಯದ ಅರ್ಚಕರಿಂದ ವಿಗ್ರಹಗಳನ್ನು ಶುದ್ದಿಕರಿಸಿ ಪ್ರಥಮ ಪೂಜೆ ಸಲ್ಲಿಕೆ ಮಾಡಲಾಗಿದೆ.
ಎಂಟು ಗಂಟೆ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಾಲಯ ಸೇರಿ ನಗರದ ಸಾಕಷ್ಟು ದೇವಾಲಯಗಳು ಓಪನ್ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?