ಚೈತ್ರಾ ಕುಂದಾಪುರ್ ಮೇಲೆ ತಂದೆ ಗರಂ: ಮದುವೆ ಬಗ್ಗೆ ಹೇಳಿದ್ದೇನು? ಸ್ವಂತ ತಂದೆಗೆ ಯಾಕಿಷ್ಟು ಸಿಟ್ಟು?

ಮೇ 15, 2025 - 14:02
 0  24
ಚೈತ್ರಾ ಕುಂದಾಪುರ್ ಮೇಲೆ ತಂದೆ ಗರಂ: ಮದುವೆ ಬಗ್ಗೆ ಹೇಳಿದ್ದೇನು? ಸ್ವಂತ ತಂದೆಗೆ ಯಾಕಿಷ್ಟು ಸಿಟ್ಟು?

ಬಿಗ್ ಬಾಸ್ ಸೀಸನ್ 11 ರಲ್ಲಿ ಮಾತಿನ ಮೂಲಕವೇ ಹೆಚ್ಚು ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಅವರ ಮದುವೆಗೆ ಅವರ ಸ್ವಂತ ತಂದೆಯಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಸುದ್ದಿಗಾರರ ಜೊತೆ ಇಂದು ಮಾತನಾಡಿದ ಬಾಲಕೃಷ್ಣ ನಾಯ್ಕ್ ಅವರ ತನ್ನ ಮಗಳು, ಅಳಿಯನ ಮೇಲೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಚೈತ್ರಾ ಕುಂದಾಪುರ ಅವರು ತನ್ನ ಮದುವೆಗೆ ತಂದೆಯವರನ್ನ ಆಹ್ವಾನಿಸಿಲ್ಲ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗೋಕೂ ಅವರ ತಂದೆ ಅನುಮತಿ ಕೊಟ್ಟಿರಲಿಲ್ಲವಂತೆ. ಈ ಕುರಿತು ವಿವರವಾಗಿ ಮಾತನಾಡಿರುವ ಚೈತ್ರಾ ಕುಂದಾಪುರ ಅವರ ತಂದೆ ತನ್ನ ಸಿಟ್ಟು, ಆಕ್ರೋಶವನ್ನೆಲ್ಲಾ ಹೊರ ಹಾಕಿದ್ದಾರೆ.

ಚೈತ್ರಾ ಕುಂದಾಪುರ ಮದುವೆಗೆ ನಾನು ಹೋಗಿಲ್ಲ. ಯಾಕಂದ್ರೆ ಅವರಿಬ್ಬರು ಕಳ್ಳರು. ಕಳ್ಳರು, ಕಳ್ಳರು ಮದುವೆ ಆಗೋದು. ಅದರ ಬಗ್ಗೆ ನಾನು ಏನು ಹೇಳೋದು. 12 ವರ್ಷದಿಂದ ಚೈತ್ರಾ ಕುಂದಾಪುರ ಗಂಡ ನಮ್ಮ ಮನೆಯಲ್ಲೇ ಇದ್ದವ. ಅವನು ಕಳ್ಳ. ಇವರು ಕಳ್ಳರು. ಕಳ್ಳ, ಕಳ್ಳರು ಇಬ್ಬರು ಮದುವೆ ಆಗಿದ್ದಾರೆ.

ದರೋಡೆ ಮಾಡೋದು, ದೇಶಕ್ಕೆ ದ್ರೋಹ, ವಂಚನೆ ಮಾಡೋದೇ ಇವರ ಕಸುಬು. ನಮ್ಮ ಕುಟುಂಬದ ಮಾನ, ಮರ್ಯಾದೆಯನ್ನು ತೆಗೆದಿದ್ದಾರೆ. ಅವಳನ್ನ ಕಂಡ್ರೆ ನನಗೆ ಆಗೋದಿಲ್ಲ. ಅವಳು ಎಂದಿಗೂ ಉದ್ಧಾರ ಆಗಲ್ಲ. ಅವರು ಮಾಡೋ ಕೆಟ್ಟ ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ಅವರು ಮೋಸ, ವಂಚನೆಯಲ್ಲಿದ್ದರು. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಇರುವವನು. ತಾನೇ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ ಅನ್ನೋ ಸುಳ್ಳು, ಸುಳ್ಳು ಮಾತನಾಡುತ್ತಾರೆ ಎಂದರು. 

ಇನ್ನೂ ಚೈತ್ರಾ ಕುಂದಾಪುರ ಅವರ ಮನೆಯಲ್ಲಿ ನಡೆಯುತ್ತಿದ್ದ ತಂದೆ, ಮಗಳ ಜಿದ್ದಾಜಿದ್ದಿ ಇದೀಗ ಹೊರ ಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow