ಜಾಮೀನು ರದ್ದು: ದರ್ಶನ್ ಸಿನಿಮಾಗಳ ಕಥೆ ಏನೂ..? “ಡೆವಿಲ್” ರಿಲೀಸ್ ಆಗುತ್ತಾ..?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ರದ್ದುಪಡಿಸಿ, ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರಿಂದ ಅವರು ಮತ್ತೆ ಬಂಧನಕ್ಕೆ ಒಳಗಾಗಲಿದ್ದಾರೆ. ಇದೀಗ, ದರ್ಶನ್ ಅವರ ಮುಂದಿನ ಸಿನಿಮಾಗಳ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
‘ಡೆವಿಲ್’ ಸಿನಿಮಾಗೆ ತೊಂದರೆ ಇಲ್ಲ
ದರ್ಶನ್ ಅವರು ನಟಿಸಿರುವ ಡೆವಿಲ್ ಸಿನಿಮಾ ಜಾಮೀನು ಪಡೆಯುವ ಮೊದಲು ಶೂಟಿಂಗ್ ಪ್ರಾರಂಭವಾಗಿತ್ತು. ಅವರು ಜೈಲಿಗೆ ಹೋಗಿದ್ದರಿಂದ ಶೂಟ್ ಮಧ್ಯದಲ್ಲಿ ನಿಂತಿತ್ತು. ಜಾಮೀನು ಪಡೆದು ಹೊರಬಂದ ನಂತರ, ಶೂಟ್ ಮತ್ತು ಡಬ್ಬಿಂಗ್ ಪೂರ್ಣಗೊಳಿಸಿದರು. ಇತ್ತೀಚೆಗೆ ವಿದೇಶದಲ್ಲಿ ನಡೆದ ಶೂಟಿಂಗ್ ಬಳಿಕ, ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಹೀಗಾಗಿ, ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆ ಇರುವ ಸಾಧ್ಯತೆ ಇಲ್ಲ.
ಮುಂದಿನ ಚಿತ್ರಗಳಿಗೆ ಸಮಸ್ಯೆ ಸಾಧ್ಯತೆ
ದರ್ಶನ್ ಬಳಿ ಪ್ರಸ್ತುತ ಅಧಿಕೃತವಾಗಿ ಇರುವ ಸಿನಿಮಾ ಡೆವಿಲ್ ಮಾತ್ರ. ಆದರೆ, ಇನ್ನೂ ಘೋಷಿಸದ ಎರಡು ಸಿನಿಮಾಗಳು ಅವರ ಬಳಿ ಇವೆ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ, ಈ ಸಿನಿಮಾಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.
1. ವೀರ ಸಿಂಧೂರ ಲಕ್ಷ್ಮಣ – ಶೈಲಜಾ ನಾಗ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನ.
2. ಚಂದು ನಿರ್ದೇಶನದ ಸಿನಿಮಾ – ಇದರಲ್ಲಿ ದರ್ಶನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಈ ಎರಡೂ ಯೋಜನೆಗಳು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ, ಆದರೆ ದರ್ಶನ್ ಬಂಧನದಿಂದಾಗಿ ಕೆಲಸ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?