ಜೊತೆಗಿದ್ದುಕೊಂಡೇ ಖೆಡ್ಡಾ ತೋಡುತ್ತಿರುವ ದಿಯಾ..? ಜಯದೇವ್‌ ಹೊಸ ಪ್ಲ್ಯಾನ ಏನು?

ಸೆಪ್ಟೆಂಬರ್ 24, 2025 - 20:01
ಸೆಪ್ಟೆಂಬರ್ 24, 2025 - 13:23
 0  16
ಜೊತೆಗಿದ್ದುಕೊಂಡೇ ಖೆಡ್ಡಾ ತೋಡುತ್ತಿರುವ ದಿಯಾ..? ಜಯದೇವ್‌ ಹೊಸ ಪ್ಲ್ಯಾನ ಏನು?

ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಹೊಸ ಕುತಂತ್ರಗಳು ಒಂದರ ಹಿಂದೆ ಒಂದಾಗಿ ಬಯಲಾಗುತ್ತಿವೆ. ದಿಶಾ ತನ್ನ ದೊಡ್ಡ ಹುನ್ನಾರದಿಂದ ಜಯದೇವ್ನ್ನು ಮದುವೆಯಾಗಿದ್ದರೂ, ಅವಳ ನಿಜ ಸ್ವಭಾವ ಇದೀಗ ಹೊರಬರುತ್ತಿದೆ. ಜಯದೇವ್ ಈಗಾಗಲೇ 600 ಕೋಟಿ ರೂ. ಸಾಲದ ಹೊಣೆ ಹೊತ್ತಿದ್ದಾನೆ. ಪ್ರಾಪರ್ಟಿ ಮಾರಾಟ ಮಾಡಿದರೆ ಸಾಲ ತೀರಬಹುದು, ಆದರೆ ಇನ್ನೂ ಎರಡು ವರ್ಷ ಕಾದರೆ ಆಸ್ತಿಯ ಬೆಲೆ ಡಬಲ್ ಆಗುತ್ತದೆ ಎಂಬ ಲೆಕ್ಕ ಹಾಕಿದ್ದಾನೆ.

ಬ್ಯಾಂಕ್ಗೆ ಸಾಲ ತೀರಿಸಲು ಸ್ವಲ್ಪ ಸಮಯ ಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಸಾಲ ಮಾಡ್ತಿರುವ ಜೊತೆಗೆ ಹಣವನ್ನು ಖಾಲಿ ಮಾಡುತ್ತಿರುವುದು ಪಾರ್ಥ ಮತ್ತು ಅಪೇಕ್ಷಾಗೆ ಬೇಸರ ತಂದಿದೆ. “ಗೌತಮ್ ಹೆಸರನ್ನು ಹೇಳಿಕೊಂಡು ಬದುಕೋ ಇವರು, ಮೋಸಕ್ಕೆ ಸಿದ್ಧರಾಗಿದ್ದಾರೆಎಂದು ಅಪೇಕ್ಷಾ ಆಕ್ರೋಶ ಹೊರಹಾಕಿದ್ದಾಳೆ. ಈಗ ಶಕುಂತಲಾ ಪ್ರೆಸ್ಟೀಜ್‌, ಸ್ಟೇಟಸ್ಹೆಸರಿನಲ್ಲಿ ದಿನಕ್ಕೆ ಮೂರು ಕೋಟಿ ರೂಪಾಯಿ ಹಣವನ್ನು ಖಾಲಿ ಮಾಡಿದ್ದಾಳೆ.

ರೀತಿ ಹಣ ಖರ್ಚು ಮಾಡಿದರೆ ನನ್ನ ಕಥೆ ಅಷ್ಟೇ ಅಂತ ದಿಯಾ ಫಿಕ್ಸ್ಆಗಿದ್ದಾಳೆ. “ಸಾಲ ಇದೆ, ಹಣ ಖಾಲಿ ಮಾಡುತ್ತ ಹೋದರೆ ಹೇಗೆ? ಕ್ಲಬ್ಗೆ ಹೋಗಿ ದಿನಕ್ಕೆ ಮೂರು ಕೋಟಿ ರೂಪಾಯಿ ಹಾಳು ಮಾಡ್ತಾರೆ ಅಂದ್ರೆ ಹೇಗೆ? ಮೂರು ಕೋಟಿ ರೂಪಾಯಿ ದುಡಿಯೋದು ಸುಲಭದ ಕೆಲಸವೇ?” ಎಂದು ಅವಳು ಜಯದೇವ್ಬಳಿ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಜಯದೇವ್ಇಲ್ಲ ಸಲ್ಲದ ಉತ್ತರ ಕೊಟ್ಟಿದ್ದನು.

 ಜಯದೇವ್ ಉತ್ತರದಿಂದ ಅಸಮಾಧಾನಗೊಂಡ ದಿಯಾ, ತಾನು ತಪ್ಪು ಹಡಗಿನಲ್ಲಿ ಏರಿದ್ದೇನೆ ಎಂದು ಅರಿಯುತ್ತಾಳೆ. ಅವಳಿಗೆ ಜಯದೇವ್ ಮೇಲಿಲ್ಲ ಲವ್ದುಡ್ಡಿಗೋಸ್ಕರವೇ ಮದುವೆಯಾಗಿದ್ದಾಳೆ. ಹೀಗಾಗಿ ಮುಂದೆ ಮನೆಯಿಂದ ಹೊರಟು, ತನ್ನಿಗಿಷ್ಟವಾದಷ್ಟು ಹಣ ಗಳಿಸಲು, ಬದುಕನ್ನು ತಾನೇ ನಡೆಸಲು ತೀರ್ಮಾನ ಮಾಡಿದ್ದಾಳೆ. ದಿಯಾ ಮನೆ ಬಿಟ್ಟು ಹೋದರೆ, ಮಲ್ಲಿಯ ಜೊತೆ ಜಯದೇವ್ ಬದುಕಬೇಕಾದ ಪರಿಸ್ಥಿತಿ ಬರಬಹುದೇ? ಧಾರಾವಾಹಿ ಮತ್ತಷ್ಟು ರೋಚಕವಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow