ಡಿಕೆಶಿ ಆದೇಶದ ಬೆನ್ನಲ್ಲೇ Bigg Boss ಮನೆ ಓಪನ್‌: ಸ್ಪರ್ಧಿಗಳು ಬಂದರೂ ಶುರುವಾಗಿಲ್ಲ ಆಟ!

ಅಕ್ಟೋಬರ್ 9, 2025 - 11:40
 0  9
 ಡಿಕೆಶಿ ಆದೇಶದ ಬೆನ್ನಲ್ಲೇ Bigg Boss ಮನೆ ಓಪನ್‌: ಸ್ಪರ್ಧಿಗಳು ಬಂದರೂ ಶುರುವಾಗಿಲ್ಲ ಆಟ!

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸೆಟ್ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಮಗಳನ್ನು ಉಲ್ಲಂಘಸಿದ್ದ ಕಾರಣಕ್ಕೆ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಇದರಿಂದಾಗಿ ಬಿಗ್​​ಬಾಸ್ ಶೋ ಬಂದ್ ಆಗಿತ್ತು, ಸ್ಪರ್ಧಿಗಳನ್ನು ಈಗಲ್​​ಟನ್ ರೆಸಾರ್ಟ್​​​​ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಶೋ ಪ್ರಾರಂಭಿಸಲು ಅನುಮತಿ ನೀಡಿದ್ದು,

ರಾತ್ರೋರಾತ್ರಿ ಸ್ಪರ್ಧಿಗಳನ್ನು ರೆಸಾರ್ಟ್​​ನಿಂದ ಮತ್ತೆ ಬಿಗ್​​ಬಾಸ್ ಮನೆಗೆ ಕರೆತರಲಾಗಿದೆ. ಸ್ಪರ್ಧಿಗಳು ರೆಸಾರ್ಟ್​​ನಿಂದ ಹೊರಟು, ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್​​ ಆದೇಶದಂತೆ ಇದೀಗ ಜಾಲಿವುಡ್ಸ್ಟುಡಿಯೋದ ಬಿಗ್ ಬಾಸ್ಮನೆ ಓಪನ್ಮಾಡಲಾಗಿದೆ.

ಸ್ಪರ್ಧಿಗಳಿಗೂ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇನ್ನೂ ಮಾಲಿನ್ಯ ಮಂಡಳಿಯಿಂದ ಅಧಿಕೃತ ಆದೇಶ ಬಂದಿಲ್ಲ.ಬಿಗ್ಬಾಸ್​​ ಮನೆಗೆ ಸ್ಪರ್ಧಿಗಳು ಮತ್ತು ಸಿಬ್ಬಂದಿ ಎಂಟ್ರಿ ಕೊಟ್ಟಿದ್ದರು ಕೂಡ ಇನ್ನೂ ಬಿಗ್ಮನೆಯಲ್ಲಿ ಆಟ ಶುರುವಾಗಿಲ್ಲ. ಸ್ಪರ್ಧಿಗಳು ಮತ್ತು ಸಿಬ್ಬಂದಿ ಇನ್ನೂ ಆತಂಕದಲ್ಲಿದ್ದಾರೆ. ಯಾಕಂದರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ.

ಇಡೀ ಬಿಗ್ಬಾಸ್ತಂಡ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದೆ. ಮಾಲಿನ್ಯ ಮಂಡಳಿಯಿಂದ ಅಧಿಕೃತ ಆದೇಶ ಪಡೆದ ನಂತರ ಬಿಗ್ಬಾಸ್ಮನೆಯಲ್ಲಿ ಸ್ಪರ್ಧಿಗಳ ಆಟ ಶುರುವಾಗಲಿದೆ. ಬಹುತೇಕ ಇಂದು ಮಧ್ಯಾಹ್ನದ ನಂತರ ಮತ್ತೆ ಆರಂಭವಾಗಲಿದೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಮರಳಿದ್ದಾರೆ. ಆದರೆ, ಆಟ ಇನ್ನೂ ಶುರುವಾಗಿಲ್ಲ. ಎಲ್ಲಾ ಸಿದ್ಧತೆಗಳು ಮುಗಿದ ನಂತರ ಮಾತ್ರ ಮತ್ತೆ ಆಟ ಆರಂಭವಾಗುತ್ತದೆ. ಸೀಸನ್ 12ಗೆ ಯಾವುದೇ ಸಮಸ್ಯೆ ಇಲ್ಲ. ಇಂದು ಆದೇಶ ಬರಲಿದ್ದು, ಮಧ್ಯಾಹ್ನದ ನಂತರ ಎಂದಿನಂತೆ ಶೋ ಪ್ರಸಾರವಾಗುತ್ತದೆ ಎನ್ನಲಾಗಿದೆ. ಬೆಳವಣಿಗೆಯಿಂದ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಹರಡಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow