ಡಿಸೆಂಬರ್ ನಲ್ಲಿ WPL ಮಿನಿ ಹರಾಜು! ಬೆಂಗಳೂರಿನಲ್ಲಿ ಬಿಡ್ಡಿಂಗ್! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

ನವೆಂಬರ್ 30, 2024 - 09:10
 0  10
ಡಿಸೆಂಬರ್ ನಲ್ಲಿ WPL ಮಿನಿ ಹರಾಜು! ಬೆಂಗಳೂರಿನಲ್ಲಿ ಬಿಡ್ಡಿಂಗ್! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಗ್ಲೆಂಡ್ ನಾಯಕಿ ಹೀಥರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲಿಯಾ ತಹುಹು, ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರು ಮಿನಿ ಹರಾಜಿನಲ್ಲಿರು ಪ್ರಮುಖ ಅಂತಾರಾಷ್ಟ್ರೀಯ ಆಟಗಾರ್ತಿಯರಾಗಿದ್ದಾರೆ. ಆಲ್‌ರೌಂಡರ್ ಸ್ನೇಹ್ ರಾಣಾ, ಲೆಗ್‌ಸ್ಪಿನ್ನರ್ ಪೂನಮ್ ಯಾದವ್ ಮತ್ತು ಬ್ಯಾಟರ್ ವೇದಾ ಕೃಷ್ಣಮೂರ್ತಿ ಪ್ರಮುಖ ಪ್ರಮುಖ ಭಾರತೀಯ ಆಟಗಾರ್ತಿಯರಾಗಿದ್ದಾರೆ.

ಐಪಿಎಲ್ ಮೆಗಾ ಹರಾಜು ಮುಗಿದ ಬೆನ್ನಲ್ಲೇ 2025 ರ ಋತುವಿನ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. 

ಮೆಗ್ ಲ್ಯಾನಿಂಗ್ ನೇತೃತ್ವದ ಮತ್ತು 2023 ಮತ್ತು 2024 ರಲ್ಲಿ ರನ್ನರ್-ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್, ₹2.5 ಕೋಟಿ ಪರ್ಸ್ ಹೊಂದಿದ್ದು, ಕಡಿಮೆ ಪರ್ಸ್‌ನೊಂದಿಗೆ ಹರಾಜಿಗೆ ಬರಲಿದೆ. ಎರಡು ಆವೃತ್ತಿಯಲ್ಲಿ ಕೊನೆಯ ಸ್ಥಾನ ಗಳಿಸಿರುವ ಗುಜರಾತ್ ಜೈಂಟ್ಸ್ ₹4.4 ಕೋಟಿ ಪರ್ಸ್ ಹೊಂದಿದ್ದು ಹೆಚ್ಚಿನ ಹಣ ಹೊಂದಿರುವ ತಂಡವಾಗಿದೆ. ಏಳು ಆಟಗಾರರನ್ನು ಬಿಡುಗಡೆ ಮಾಡಿದ್ದು ತಂಡವನ್ನು ಮತ್ತೆ ಕಟ್ಟಲು ಸಜ್ಜಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow