ಡೈರೆಕ್ಟರ್ ಗುರು ಸಾವಿನ ಹಿಂದಿದ್ಯಾ ಖಿನ್ನತೆ!? ನವೆಂಬರ್ 19ಕ್ಕೆ ಇತ್ತು ಆ ಕೇಸ್ ನಲ್ಲಿ ವಿಚಾರಣೆ!

ನಿನ್ನೆಯಷ್ಟೇ ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನ ಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ.
ಸಾಲಗಾರರ ಕಿರುಕುಳದಿಂದ ಅವರು ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ. ಮಠ, ಎದ್ದೇಳು ಮಂಜುನಾಥ ಸೇರಿ ಕೆಲವು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಘಟನಾ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಗುರುಪ್ರಸಾದ್ ಅವರು ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು. ಅವರು ನಿನ್ನೆಯಷ್ಟೆ ಅಂದರೆ ನವೆಂಬರ್ 2 ಜನ್ಮದಿನವಿತ್ತು. ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕೆಲಸ ಮಾಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೆತ್‌ನೋಟ್ ಕೂಡ ಸಿಕ್ಕಿಲ್ಲ. 5 ಕನ್ನಡ ಚಿತ್ರಗಳನ್ನ ನಿರ್ದೇಶಿಸಿರುವ ಗುರುಪ್ರಸಾದ್ ಅವರು ಸಾಕಷ್ಟು ಜನರಿಗೆ ಪರಿಚಿತರು.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಲದ ಮೇಲೆ ರಕ್ತ ಚೆಲ್ಲಿದೆ. ತಲೆಗೆ ಒಂದು ಬಟ್ಟೆಯನ್ನು ಕಟ್ಟಿಕೊಂಡಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಅವರು ಹತ್ತು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಇದೆ.
ಬಾಡಿಗೆ ಮನೆಯಲ್ಲಿ ಅವರು ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದೆ. ಕಳೆದ ಮೂರು, ನಾಲ್ಕು ದಿನಗಳಿಂದ ಅವರನ್ನು ಯಾರೂ ಕಂಡಿರಲಿಲ್ಲ ಎಂದು ಅಲ್ಲಿನ ಸ್ಥಳಿಯರು ಹೇಳುತ್ತಿದ್ದಾರೆ. ನಿನ್ನೆ ದೇಹದಿಂದ ಕೊಳೆತ ವಾಸನೆ ಬರುತ್ತಿದ್ದರಿಂದ ಮನೆಯ ಬಾಗಿಲನ್ನು ಒಡೆದು ನೋಡಿದಾಗ ಮೃತ ದೇಹ ಪತ್ತೆಯಾಗಿದೆ.
ಚೆಕ್ ಬೌನ್ಸ್ ಕೇಸ್ ವೊಂದರಲ್ಲಿ ಕೋರ್ಟು ಕಚೇರಿ ಅಲಿಯುತ್ತಿದ್ದ ಗುರುಪ್ರಸಾದ್ ಅವರು ತುಂಬಾ ಸಾಲದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಈ ನಡುವೆ ಜಯನಗರದಲ್ಲಿ ಮತ್ತೊಂದು ಕೇಸ್ ದಾಖಲಾಗಿತ್ತು. ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಅಂತಾ ದೂರು ದಾಖಲಾಗಿತ್ತು. ಆರ್ಥಿಕವಾಗಿ ಒಂದಷ್ಟು ಸಮಸ್ಯೆ ಎದುರಿಸ್ತಿದ್ದ ಗುರುಪ್ರಸಾದ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ಗುರು ಪ್ರಸಾದ್ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಮೈತುಂಬ ಸಾಲ ಮಾಡಿಕೊಂಡಿದ್ದ ಅವರು ಕೊನೆಗೆ ಆತ್ಮಹತ್ಯೆಯ ಮೊರೆ ಹೋದರು. ತಾವು ವಾಸವಿದ್ದ ಅಪಾರ್ಟ್ಮೆಂಟ್ನಲ್ಲೇ ಕೊನೆಯುಸಿರು ಎಳೆದರು. ಅವರ ಸಾವು ಶಾಕಿಂಗ್ ಎನಿಸಿದೆ. ಕನ್ನಡ ಚಿತ್ರರಂಗದ ಅನೇಕರು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅವರು ದುಡುಕಿನ ನಿರ್ಧಾರ ಮಾಡಿದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಗುರುಪ್ರಸಾದ್ ಅವರ ಚೆಕ್ಬೌನ್ಸ್ ಪ್ರಕರಣದ ಬಗ್ಗೆ ಚರ್ಚೆ ನಡೆದಿದೆ.
ವಿ. ಶ್ರೀನಿವಾಸ್ ಅವರಿಗೆ 30 ಲಕ್ಷ ರೂಪಾಯಿ ಹಣವನ್ನು ಗುರುಪ್ರಸಾದ್ ನೀಡಬೇಕಿತ್ತು. ಗುರುಪ್ರಸಾದ್ ಈ ಮೊದಲು ನೀಡಿದ್ದ ಚೆಕ್ಗಳು ಬೌನ್ಸ್ ಆಗಿದ್ದವು. ಹೀಗಾಗಿ, ಶ್ರೀನಿವಾಸ್ ಅವರು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ಸಂಬಂಧ ಅಕ್ಟೋಬರ್ 22ರಂದು ಗುರುಪ್ರಸಾದ್ ಅವರು ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ಹೇಳಿದ್ದ ಗುರುಪ್ರಸಾದ್ ಅವರು ಮೆಡಿಕಲ್ ಸರ್ಟಿಫಿಕೇಟ್ ಕೂಡ ನೀಡಿದ್ದರು.
ನವೆಂಬರ್ 19ಕ್ಕೆ ಮುಂದಿನ ವಿಚಾರಣೆ ಇತ್ತು. ಸದ್ಯದಲ್ಲೇ ಕೋರ್ಟ್ನಲ್ಲಿ ಕೇಸ್ ಮುಗಿದು ಶ್ರೀನಿವಾಸ್ ಪರ ತೀರ್ಪು ಬರುವ ಎಲ್ಲಾ ಸಾಧ್ಯತೆ ಇತ್ತು ಎನ್ನಲಾಗಿದೆ. ಈಗಾಗಲೇ ಹಲವು ಬಾರಿ ಕೋರ್ಟ್ಗೆ ಬಾರದೆ ಗುರುಪ್ರಸಾದ್ ಅವರು ತಪ್ಪಿಸಿಕೊಂಡಿದ್ದರು. ಸದ್ಯದಲ್ಲೇ ಮತ್ತೊಮ್ಮೆ ಅರೆಸ್ಟ್ ವಾರಂಟ್ ಜಾರಿ ಆಗುವ ಸಾಧ್ಯತೆಗಳು ಇದ್ದವು ಎಂದು ವರದಿ ಆಗಿದೆ.
ಈ ರೀತಿಯ ಹಲವು ತೊಂದರೆಗಳಿಗೆ ಗುರು ಪ್ರಸಾದ್ ಒಳಗಾಗಿದ್ದರು. ಅವರು ತಮ್ಮ ಮಾತಿನ ಮೂಲಕ, ಸಿನಿಮಾಗಳಲ್ಲಿ ಭಿನ್ನ ಸಂಭಾಷಣೆ ಮೂಲಕ ಗಮನ ಸೆಳೆದಿದ್ದರು. ಅವರು ಮೂರು ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






