ತಡರಾತ್ರಿ ತಿನ್ನುವವರಿಗೆ ಈ ಕಾಯಿಲೆ ಬರುವ ಅಪಾಯ.. ಕೂಡಲೇ ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಿ!

ತಡರಾತ್ರಿಯೋ ಅಥವಾ ಹಸಿವೆಯಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ? ರಾತ್ರಿ ಲೇಟಾಗಿ ಊಟ ಮಾಡುವುದರಿಂದ ಏನಾಗುತ್ತದೆ ಎನ್ನುವುದನ್ನು ನೋಡೋಣ.
- ಜೀರ್ಣಕಾರಿ ಸಮಸ್ಯೆಗಳು ಹೆಚ್ಚುತ್ತವೆ: ಊಟ ವಿಳಂಬವಾದರೆ ಜೀರ್ಣಕಾರಿ ಸಮಸ್ಯೆಗಳು ಕಂಡುಬರುತ್ತವೆ. ಏಕೆಂದರೆ ರಾತ್ರಿ ತಡವಾಗಿ ತಿನ್ನುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದಿರುವುದರಿಂದ ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಗೆ ಕಾರಣವಾಗಬಹುದು.
- ತೂಕ ಹೆಚ್ಚಾಗುವ ಅಪಾಯ: ತಡವಾಗಿ ತಿನ್ನುವುದರಿಂದ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಾಧ್ಯವಾಗುವುದಿಲ್ಲ. ಇದು ಕೊಬ್ಬು ಶೇಖರಣೆ ಮತ್ತು ತೂಕ ಹೆಚ್ಚಾಗುವ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
- ನಿದ್ರಾಹೀನತೆ: ರಾತ್ರಿ ಊಟವಾದ ತಕ್ಷಣ ಮಲಗುವ ಅಭ್ಯಾಸ ರೂಢಿಸಿಕೊಂಡಲ್ಲಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದು ನಿಮ್ಮ ಸುಖ ನಿದ್ರೆಗೆ ಅಡೆತಡೆ ಉಂಟುಮಾಡುತ್ತದೆ ಇದರಿಂದ ನಾನಾ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಜೊತೆಗೆ ನಿದ್ರಾಹೀನತೆಗೆ ಮುಖ್ಯ ಕಾರಣವಾಗುತ್ತದೆ
- ಹಾರ್ಮೋನುಗಳ ಅಸಮತೋಲನ: ತಡವಾಗಿ ತಿನ್ನುವುದು ದೇಹದಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಇದು ಮಾನಸಿಕ ಒತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.
- ಹೃದಯದ ಆರೋಗ್ಯದ ಮೇಲೆ ಪರಿಣಾಮ: ರಾತ್ರಿ ತಡವಾಗಿ ತಿನ್ನುವುದು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಸಮಸ್ಯೆಗಳಿಗೆ ಕಾರಣವಾಗಬಹುದು. ಇವೆಲ್ಲವೂ ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು.
ನಿಮ್ಮ ಪ್ರತಿಕ್ರಿಯೆ ಏನು?






