ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಕಾಲ್ತುಳಿತ; ಘೋರ ದುರಂತದಲ್ಲಿ 31 ಜನರು ಸಾವು

ಸೆಪ್ಟೆಂಬರ್ 27, 2025 - 23:07
 0  13
ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಕಾಲ್ತುಳಿತ; ಘೋರ ದುರಂತದಲ್ಲಿ 31 ಜನರು ಸಾವು

ತಮಿಳುನಾಡು: ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಬೃಹತ್ ರ್ಯಾಲಿಯಲ್ಲಿ ಭಾರಿ ಜನಸ್ತೋಮ ಹರಿದು ಬಂದು ನೂಕುನುಗ್ಗಲು ಉಂಟಾಗಿ 31 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಸಾವಿರ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಅಕಸ್ಮಾತ್ತಾಗಿ ಜನರು ಮೂರ್ಛೆ ತಪ್ಪಿದ ಪರಿಣಾಮ ಗೊಂದಲ ಉಂಟಾಯಿತು.

ಸ್ಥಳದಲ್ಲೇ ಪರಿಸ್ಥಿತಿಯನ್ನು ಗಮನಿಸಿದ ವಿಜಯ್ ತಕ್ಷಣವೇ ಆ್ಯಂಬುಲೆನ್ಸ್‌ಗಳನ್ನು ಕರೆಸಲು ಮುಂದಾಗಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು. “ಯಾರೂ ಗಾಬರಿಯಾಗಬೇಡಿ, ಆಂಬ್ಯುಲೆನ್ಸ್ ಬರುತ್ತಿದೆ. ದಯವಿಟ್ಟು ಪೊಲೀಸರಿಗೆ ಸಹಕರಿಸಿ” ಎಂದು ವಿಜಯ್ ಮೈಕ್ ಮೂಲಕ ಜನತೆಗೆ ಮನವಿ ಮಾಡಿದರು.

ಅರ್ಧಕ್ಕೆ ಭಾಷಣವನ್ನು ನಿಲ್ಲಿಸಿದ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದವರಿಗೆ ನೀರು ವಿತರಿಸುವಂತೆ ಹಾಗೂ ಆ್ಯಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿದರು.

ಇನ್ನೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನಿಸುತ್ತಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow