ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಮೂರ್ತಿಯನ್ನು ಇಡಬೇಡಿ!

ಸನಾತನ ಧರ್ಮದಲ್ಲಿ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಂಡಿರುವವರು ಮನೆಯಲ್ಲಿ ನಿತ್ಯವೂ ದೇವರ ಪೂಜೆಯನ್ನು ಮಾಡುತ್ತಾರೆ. ಮನೆಯಲ್ಲಿ ಪೂಜೆ ಮಾಡುವುದಕ್ಕೂ ಅದರದ್ದೇ ಆದ ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದಿದ್ದರೆ ಪೂಜೆಯ ಫಲ ಸಿಗುವುದಿಲ್ಲವೆಂದು ಹೇಳಲಾಗುತ್ತದೆ. ಬದಲಾಗಿ ಹಲವು ಬಾರಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಪೂಜೆಯ ಒಂದು ನಿಯಮದ ಕುರಿತು ಹೇಳಲಿದ್ದೇವೆ. ಮನೆಯ ದೇವರ ಕೋಣೆಯಲ್ಲಿ ಕೆಲವು ದೇವರು ಮತ್ತು ದೇವತೆಗಳ ವಿಗ್ರಹ ಅಥವಾ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಎಂದು ಹೇಳಲಾಗುತ್ತದೆ. ಇಂತಹ ದೇವರನ್ನು ನೀವು ಮನೆಯ ಹೊರಗಿನ ದೇವಸ್ಥಾನದಲ್ಲಿ ಪೂಜಿಸಬಹುದು.
ದೇವರ ಮನೆಯಲ್ಲಿ ಈ ವಿಗ್ರಹವೂ ಬೇಡ : ಯಾವ ಲೋಹ ಮಾತ್ರವಲ್ಲ ಅದ್ರ ಗಾತ್ರದ ಬಗ್ಗೆಯೂ ನೀವು ಗಮನ ನೀಡಬೇಕಾಗುತ್ತದೆ. ಮನೆಯ ದೇವಸ್ಥಾನದಲ್ಲಿ ಇಡುವ ವಿಗ್ರಹಗಳು ನಿಗದಿತ ಗಾತ್ರದಲ್ಲಿರಬೇಕು. ಶಾಸ್ತ್ರಗಳ ಪ್ರಕಾರ 9 ಇಂಚು ಎತ್ತರದ ವಿಗ್ರಹಗಳನ್ನು ಪೂಜಾ ಸ್ಥಳದಲ್ಲಿ ಇಡಬಾರದು. ಮೂರ್ತಿಗಳನ್ನು ದೀರ್ಘಕಾಲ ಪೂಜಿಸುವುದರಿಂದ ಪೂಜೆಯ ಪೂರ್ಣ ಫಲವೂ ಸಿಗುವುದಿಲ್ಲ. ಇದಲ್ಲದೇ ವಿಗ್ರಹಗಳ ಶುದ್ಧತೆಯೂ ಉಳಿಯುವುದಿಲ್ಲ. ಶಾಸ್ತ್ರಗಳ ಪ್ರಕಾರ, ಚಿಕ್ಕ ವಿಗ್ರಹಗಳನ್ನು ಯಾವಾಗಲೂ ಮನೆಯಲ್ಲಿ ಇಡಬೇಕು. ಅಂದ್ರೆ 9 ಇಂಚಿಗಿಂತ ಕಡಿಮೆ ಗಾತ್ರದ ವಿಗ್ರಹವನ್ನು ನೀವು ಇಡಬೇಕು.
ಶನಿ ಪೂಜೆ ವೇಳೆ ಬಳಸ್ಬೇಡಿ ಈ ಪಾತ್ರೆ : ಪೂಜೆ ಮಾಡುವ ಮುನ್ನ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದ್ರಲ್ಲೂ ಶನಿ ಪೂಜೆ ವೇಳೆ ಹೆಚ್ಚು ಜಾಗೃತಿ ವಹಿಸಬೇಕಾಗುತ್ತದೆ. ಶನಿ ಪೂಜೆ ಮಾಡುವವರಿದ್ದರೆ ತಾಮ್ರದ ಪಾತ್ರೆಗಳನ್ನು ಬಳಸಬಾರದು. ತಾಮ್ರವನ್ನು ಸೂರ್ಯನ ಲೋಹವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿ ಪರಸ್ಪರ ಶತ್ರುಗಳು. ಹಾಗಾಗಿ ಶನಿ ದೇವರ ಪೂಜೆಯಲ್ಲಿ ತಾಮ್ರದ ಪಾತ್ರೆ ಬದಲು ನೀವು ಕಬ್ಬಿಣದ ಪಾತ್ರೆಗಳನ್ನು ಬಳಸಬಹುದು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






