ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ!

ಹಾಸನ: ಕರ್ನಾಟಕ ಸರ್ಕಾರದ ಬಗ್ಗೆ ಕೋಡಿಮಠ ಶ್ರೀ ಮತ್ತೊಮ್ಮೆ ಸ್ಫೋಟಕ ಭವಿಷ್ಯ ಹೇಳಿದ್ದಾರೆ. ರಾಜ್ಯದ ಪ್ರಾಕೃತಿಕ ಸ್ಥಿತಿಗತಿ ಮತ್ತು ಸರ್ಕಾರದ ಬಗ್ಗೆ ಅವರು ಭವಿಷ್ಯ ಹೇಳಿದ್ದಾರೆ. ಹೌದು ಹಾಸನದಲ್ಲಿ ಮಾತನಾಡಿದ ಅವರು,
ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುವ ಬಗ್ಗೆ ಮೊದಲೇ ಹೇಳಿದ್ದೆ. ವಿಮಾನ ಅಪಘಾತ ಸೇರಿದಂತೆ ಕೆಲವು ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ. ನಿರೀಕ್ಷೆಗೂ ಮೀರಿದ ದುಃಖ ಬರಲಿದೆ ಎಂದು ಮುನ್ಸೂಚನೆ ನೀಡಿದರು.
ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನಜೀವನ ಅಸ್ತಿರಗೊಳ್ಳಲಿದೆ ಎಂದು ಹೇಳಿದ್ದೆ. ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಈಗ ಕಂಡುಬರುತ್ತಿದೆ. ಈ ಅಸ್ಥಿರತೆ ಹೆಚ್ಚಾಗಲಿದೆ ಎಂದು ಸ್ವಾಮೀಜಿ ಹೇಳಿದರು.
‘‘ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು’’ ಎಂದು ಮಾರ್ಮಿಕವಾಗಿ ನುಡಿದ ಸ್ವಾಮೀಜಿ, ಇದನ್ನು ಬರೆದಿಟ್ಟುಕೊಂಡಿರಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುವೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






