‘ನಂದ ಗೋಕುಲ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್: ವಲ್ಲಭ-ಅಮೂಲ್ಯ ಮದುವೆಯಿಂದ ತಲೆತಿರುಗಿ ಬಿದ್ದ ನಂದ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಂದ ಗೋಕುಲ’ ಇದೀಗ ಮತ್ತೊಮ್ಮೆ ಕುತೂಹಲ ಹೆಚ್ಚಿಸಿದೆ. ನಂದನ ಮನೆ ಮತ್ತು ಅವನ ಸಹೋದರನ ಮನೆ ನಡುವಿನ ಅಂತರ ಕಡಿಮೆಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾಗ, ಹೊಸ ತಿರುವು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅಮೂಲ್ಯ ಮದುವೆ ಮುರಿದು ಬಿದ್ದ ಸಂದರ್ಭದಲ್ಲಿ ನಂದ ತನ್ನ ಸಹೋದರರ ಪರವಾಗಿ ನಿಂತು, ಆತ್ಮಹತ್ಯೆಗೆ ಯತ್ನಿಸಿದವನನ್ನು ಬದುಕಿಸಿದ್ದ. ಆದರೆ ಇದೀಗ ವಲ್ಲಭ ಹಾಗೂ ಅಮೂಲ್ಯ ಮದುವೆಯಾಗಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಅಚ್ಚರಿ ತಂದಿದೆ.
ಸಿದ್ಧು ಮಾಡಿದ ದ್ರೋಹ:
ಧಾರಾವಾಹಿಯ ಕಥೆಯಲ್ಲಿ ಅಮೂಲ್ಯ ಮತ್ತು ಸಿದ್ಧು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಿದ್ಧು ಕೇವಲ ಹಣಕ್ಕಾಗಿ ಪ್ರೀತಿಸುತ್ತಿದ್ದಾನೆ ಎಂಬ ಸತ್ಯ ಬಯಲಾಗಿದೆ. ಆಕೆಯ ಮದುವೆ ನಿಶ್ಚಯವಾಗಿದ್ದರೂ, ಸಿದ್ಧು ಆಕೆಯನ್ನು ಓಡಿಸಿಕೊಂಡು ಹೋಗುವ ವೇಳೆ ಚಿನ್ನ ತರುವಂತೆ ಹೇಳಿದ್ದ. ಬಳಿಕ ಆ ಚಿನ್ನವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ಅಮೂಲ್ಯ ಆತ್ಮಹತ್ಯೆಗೆ ಯತ್ನಿಸಿದ ಕ್ಷಣ:
ಸಿದ್ಧು ಮೋಸ ಮಾಡಿದ ಬಳಿಕ ಅಮೂಲ್ಯ ಮನನೊಂದು ಆತ್ಮಹತ್ಯೆಗೆ ಮುಂದಾಗುತ್ತಾಳೆ. ಈ ವೇಳೆ ಚಿನ್ನು ಸಮಯಕ್ಕೆ ಸರಿಯಾಗಿ ಬಂದು ಆಕೆಯ ಜೀವ ಉಳಿಸುತ್ತಾಳೆ. ಆಗ ವಲ್ಲಭ ಮತ್ತು ಅವನ ತಾಯಿ ಆ ಸ್ಥಳಕ್ಕೆ ಬಂದು ಅಮೂಲ್ಯನ ಬಗ್ಗೆ ತಿಳಿದುಕೊಳ್ಳುತ್ತಾರೆ.
ವಲ್ಲಭನ ತಾಯಿಯ ನಿರ್ಧಾರ:
ಈ ಘಟನೆ ನಂತರ ವಲ್ಲಭನ ತಾಯಿ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಮೂಲ್ಯ ಮತ್ತು ವಲ್ಲಭನ ಮದುವೆ. ಅಂತಿಮವಾಗಿ ಈ ಮದುವೆ ನೆರವೇರುತ್ತದೆ.
ಮನೆಗೆ ಬಂದ ಬಳಿಕ ಶಾಕಿಂಗ್ ದೃಶ್ಯ:
ಅಮೂಲ್ಯ ಹಾಗೂ ವಲ್ಲಭ ಮದುವೆಯಾಗಿ ಮನೆಗೆ ಬಂದಾಗ ನಂದ ಈ ದೃಶ್ಯ ನೋಡಿ ತಲೆತಿರುಗಿ ಬಿದ್ದಾನೆ. ಅಮೂಲ್ಯನ ಮನೆಯವರಿಗೂ ಇದು ಭಾರಿ ಆಘಾತ ತಂದಿದೆ. ಮಗಳನ್ನು ಕೊಲ್ಲಲು ಮುಂದಾದವರು ಈಗ ಈ ಮದುವೆ ನೋಡಿ ಮತ್ತಷ್ಟು ಕೋಪಗೊಳ್ಳುವ ಸಾಧ್ಯತೆ ಇದೆ. ಈ ಹೊಸ ಟ್ವಿಸ್ಟ್ ಧಾರಾವಾಹಿಯ ಕಥೆಯನ್ನು ಸಂಪೂರ್ಣ ಬೇರೆ ದಿಕ್ಕಿನಲ್ಲಿ ಕರೆದೊಯ್ಯುವ ನಿರೀಕ್ಷೆಯಿದೆ. ಕಲರ್ಸ್ ಕನ್ನಡ ವಾಹಿನಿಯು ಈ ಪ್ರೋಮೋ ಬಿಡುಗಡೆ ಮಾಡಿದ್ದು ಪ್ರೇಕ್ಷಕರಲ್ಲಿ ಹೊಸ ಕುತೂಹಲ ಹುಟ್ಟಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?