ನನ್ನ ಬಗ್ಗೆ ಮಾತಾಡೋಕೆ ನೀನ್ಯಾರು, ದಾಖಲೆ ಇದ್ರೆ ತೊರ್ಸು: ಸೃಜನ್ ಗರಂ ಆಗಿದ್ದು ಯಾರ ಮೇಲೆ?

ಕನ್ನಡ ಚಿತ್ರರಂಗದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ವ್ಯೆಯಕ್ತಿಕ ಬದುಕು ಆಗಾಗ ಚರ್ಚೆಗೀಡಾಗಿದೆ. ಆದರೆ ಸೃಜನ್ ಮಾತ್ರ ತಮ್ಮ ಬಗ್ಗೆ ಯಾವುದೇ ನೆಗೆಟಿವ್ ವಿಚಾರ ಬಂದರೂ ಕೂಡ ಅದಕ್ಕೆ ಪ್ರತಿಕ್ರಿಯೆಯನ್ನು ನೀಡುವ ಗೋಜಿಗೆ ಹೋಗಿಲ್ಲ. ಆ ಸುದ್ದಿಗಳ ಕಡೆ ಗಮನವನ್ನು ಕೂಡ ನೀಡಿಲ್ಲ. ಯಾಕೆ ಹೀಗೆ ? ಎನ್ನುವುದಕ್ಕೆ ಉತ್ತರವನ್ನು ನೀಡಿರುವ ಸೃಜನ್ ಲೋಕೇಶ್ ಗುರುತು ಪರಿಚಯ ಇಲ್ಲದವರು ಮಾತನಾಡಿದಾಗ ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೃಜನ್, ತಮ್ಮ ಮೇಲೆ ಆಗಾಗ ಕೇಳಿರುವ ಮಾತುಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಸುಮ್ ಸುಮ್ನೆ ಸಂಬಂಧ ಕಟ್ತಾರೆ, ನನಗೇನು ಹೆಂಡತಿ, ಮಕ್ಕಳು ಇಲ್ವಾ ಅಂತ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೆಂಡಕಾರಿದ್ದಾರೆ.
ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ. ಯಾಕಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ಸುಮ್ ಸುಮ್ನೆ ಸಂಬಂಧ ಕಟ್ತಾರೆ, ನನಗೇನು ಹೆಂಡತಿ, ಮಕ್ಕಳು ಇಲ್ವಾ ಅಂತ ಗರಂ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ, ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿರುವ ಸೃಜನ್ ಲೋಕೇಶ್, ನೀನು ಯಾರು ಗುರು ನನ್ನ ಬಗ್ಗೆ ಡಿಸೈಡ್ ಮಾಡೋಕೆ. ನಿನ್ನ ಹತ್ರ ಯಾವುದಾದ್ರು ದಾಖಲೆ ಇದ್ಯಾ? ಎಲ್ಲದಕ್ಕೂ ಒಂದು ಲೈನ್ ಅನ್ನೋದು ಇರುತ್ತೆ. ಅದನ್ನ ಕ್ರಾಸ್ ಮಾಡಿದ್ರೆ ಎಂಥವರಿಗೆ ಆಗಲಿ ಕೋಪ ಬಂದೇ ಬರುತ್ತೆ. ಸುಮ್ನೆ ನಿಮಗೆ ಇಷ್ಟ ಬಂದ ಹಾಗೆ ಇವ್ರು ಇರಬಹುದು. ಹಿಂಗೆ ಇರಬಹುದು. ಇವರೇ ಇರಬಹುದು ಅಂದ್ರೆ ಹೇಗೆ. ಹೆಂಗೆ ಗೊತ್ತು ಗುರು ನಿನಗೆ. ಆ ಪದಗಳಿಗೆ ಒಂದು ಮಿತಿಯೇ ಬೇಡ್ವಾ. ಜೀವನದಲ್ಲಿ ನಾವು ಇಷ್ಟು ಹದಗೆಟ್ಟು ಹೋಗಿದ್ವಾ? ಎಂದು ಸೃಜನ್ ಲೋಕೇಶ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






