BCCI ವಿರುದ್ಧ ಗುಡುಗಿದ ಕಿಂಗ್ ಕೊಹ್ಲಿ: ಒಬ್ಬಂಟಿಯಾಗಿ ಕುಳಿತು ನೋವು ಪಡೋಕೆ ಆಗಲ್ಲ ಎಂದ ವಿರಾಟ್!

ಮಾರ್ಚ್ 18, 2025 - 09:01
 0  14
BCCI ವಿರುದ್ಧ ಗುಡುಗಿದ ಕಿಂಗ್ ಕೊಹ್ಲಿ: ಒಬ್ಬಂಟಿಯಾಗಿ ಕುಳಿತು ನೋವು ಪಡೋಕೆ ಆಗಲ್ಲ ಎಂದ ವಿರಾಟ್!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಕಿಂಗ್ ಕೊಹ್ಲಿ ಅವರು, BCCI ತೆಗೆದುಕೊಂಡಿರುವ ನೂತನ ಕ್ರಮದ ವಿರುದ್ಧ ಬೇಸರ ಹೊರ ಹಾಕಿದ್ದಾರೆ. 

ವಿರಾಟ್ ಕೊಹ್ಲಿ ಅವರು ಬಿಸಿಸಿಐನ ಹೊಸ ಕುಟುಂಬ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಉಪಸ್ಥಿತಿಯನ್ನು ಸೀಮಿತಗೊಳಿಸುವ ಈ ನಿಯಮವು ಆಟಗಾರರ ಮನೋಬಲವನ್ನು ಕುಗ್ಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕುಟುಂಬದ ಬೆಂಬಲವು ಆಟಗಾರರಿಗೆ ಅತ್ಯಗತ್ಯ ಎಂದು ಒತ್ತಿ ಹೇಳಿದ ಕೊಹ್ಲಿ, ಈ ನಿಯಮವು ಅನ್ಯಾಯಕರ ಎಂದೂ ಹೇಳಿದ್ದಾರೆ. ಆಟಗಾರರ ಕಳಪೆ ಪ್ರದರ್ಶನಕ್ಕೆ ಕುಟುಂಬವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರವಾಸದ ಸಮಯದಲ್ಲಿ ಕುಟುಂಬದವರ ಉಪಸ್ಥಿತಿಯನ್ನು ಸೀಮಿತಗೊಳಿಸಿ ಕಳಪೆ ಪ್ರದರ್ಶನಕ್ಕೆ ಅವರನ್ನು ದೂಷಿಸಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ, ‘ಮೈದಾನದಲ್ಲಿ ಏನಾದರೂ ಆಟಗಾರನಿಗೆ ಅಹಿತಕರ ಸಂಗತಿ ನಡೆದರೆ, ಆತನಿಗೆ ಕುಟುಂಬದ ನೆರವು ಎಷ್ಟು ಮುಖ್ಯ ಎಂಬುದನ್ನು ಇಂತಹವರು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಆಟದ ಮೇಲೆ ನಿಯಂತ್ರಣವಿಲ್ಲದವರನ್ನು ಗುರಿಯಾಗಿಸಿ ಅವರನ್ನು ಆಟಗಾರರಿಂದ ದೂರವಿಡುವುದು ನನಗೆ ತುಂಬಾ ನಿರಾಶೆಯಾಗಿದೆ. ಅನವಶ್ಯಕವಾಗಿ ಆಟಗಾರರ ಕುಟುಂಬದ ಮೇಲೆ ಆರೋಪ ಹೊರಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಆಟಗಾರರು ತಮ್ಮ ಪ್ರದರ್ಶನವನ್ನು ಸುಧಾರಿಸಲು ಕುಟುಂಬವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ ವಿರಾಟ್ ಕೊಹ್ಲಿ, ‘ನಿಮ್ಮ ಕುಟುಂಬ ನಿಮ್ಮ ಜೊತೆಯೇ ಇರಬೇಕಾ ಎಂಬ ಪ್ರಶ್ನೆಯನ್ನು ಯಾವುದೇ ಆಟಗಾರನನ್ನು ನೀವು ಕೇಳಿದರೆ, ಅವನು ಖಂಡಿತವಾಗಿಯೂ ಹೌದು ಎಂದು ಹೇಳುತ್ತಾನೆ. ಆಟದ ವೇಳೆ ಆಟಗಾರನಿಗೆ ಅಹಿತಕರ ಘಟನೆ ನಡೆದರೆ, ಆತ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತು ದುಃಖಿತನಾಗಲು ಬಯಸುವುದಿಲ್ಲ. ಇಂತಹ ಸಂದರ್ಭದಲ್ಲಿ ಆತನ ಕುಟುಂಬ ಆತನನ್ನು ಆ ದುಃಖದಿಂದ ಬಹುಬೇಗನೇ ಹೊರಗೆ ಕರೆದುಕೊಂಡು ಬರುತ್ತದೆ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow