ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಸಚಿವ ಡಾ. ಜಿ ಪರಮೇಶ್ವರ್

ಬೆಂಗಳೂರು: ಪರಮೇಶ್ವರ್ ಜನವರಿ 8ರಂದು ಡಿನ್ನರ್ ಮೀಟಿಂಗ್ ಕರೆದಿದ್ದರು. ಇದಕ್ಕೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕಿದೆ. ಡಿಕೆ ಶಿವಕುಮಾರ್ ದೆಹಲಿಯಲ್ಲಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪಕ್ಷದ ಬ್ಯಾನರ್ ಅಡಿಯಲ್ಲಿ ಮೀಟಿಂಗ್ ಮಾಡೋದಾದರೆ ಹೈಕಮಾಂಡ್ ವಿರೋಧ ಯಾಕೆ ಅಂತ ಕೇಳಿದರೆ, ಅವರು ವಿರೋಧಿಸಿಲ್ಲ ಮುಂದೂಡಲು ಹೇಳಿದ್ದಾರೆ,
ಚಿತ್ರದುರ್ಗದಲ್ಲಿ ಆಯೋಜಿಸಿದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು, ಸಭೆಯನ್ನು ಮುಂದೂಡಿದರೆ ತಾನು ಭಾಗಿಯಾಗುವೆ ಅಂತ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಹೇಳಿದ್ದಾರೆ, ಹಾಗಾಗಿ ಪ್ರಸ್ತಾಪಿತ ಡಿನ್ನರ್ ಮೀಟಿಂಗ್ ಪೊಸ್ಟ್ಪೋನ್ ಆಗಿದೆ ಎಂದು ಪರಮೇಶ್ವರ್ ಹೇಳಿದರು.
ಇನ್ನೂ ಊಟಕ್ಕೂ ಮೊದಲು ಚರ್ಚೆ ಮಾಡುತ್ತೇವೆ. ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡುತ್ತೀರಿ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಸ್ವಲ್ಪ ದಿನ ಕಾಯೋಣ, ಸಭೆ ಅವರಿಗೆ ಇಷ್ಟ ಇತ್ತೋ ಅಥವಾ ಇಲ್ಲವೋ ಎಂಬುದು ಎಲ್ಲವೂ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






