ನವರಾತ್ರಿ ಹಬ್ಬದ 6ನೇ ದಿನ: ಕಾತ್ಯಾಯಿನಿ ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?

ಸೆಪ್ಟೆಂಬರ್ 27, 2025 - 07:01
 0  14
ನವರಾತ್ರಿ ಹಬ್ಬದ 6ನೇ ದಿನ: ಕಾತ್ಯಾಯಿನಿ ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸುವ ಚರಿತಾರ್ಥ ದಿನವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಕಾತ್ಯಾಯನ್‌ ಅಥವಾ ಕಾತ್ಯಾಯನ ಮಹರ್ಷಿ, ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ.

ಅಂತೆಯೇ ಹುಟ್ಟಿದ ಮಗುವಿಗೆ ಕಾತ್ಯಾಯಿನಿ ಎಂದು ಹೆಸರಿಡುತ್ತಾರೆ. ಇನ್ನು ಧಾರ್ಮಿಕ ಪುರಾಣಗಳ ಪ್ರಕಾರ ಕಾತ್ಯಾಯಿನಿಯು, ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಅಂದರೆ ಮಹಿಷಾಸುರನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಎನ್ನಲಾಗುತ್ತದೆ. ಮಹಿಷಾಸುರನನ್ನು ಸಂಹಾರ ಮಾಡಲು ಅವತಾರವೆತ್ತ ತಾಯಿ ಕಾತ್ಯಾಯನಿ ದೇವಿಯು ಯುದ್ಧ ಮಾಡಿ ಅವನನ್ನು ಸಂಹಾರ ಮಾಡಿದಳು.

ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು ಎಂದು ಪುರಾಣದ ಕಥೆಗಳು ಹೇಳುತ್ತವೆ. ತಾಯಿ ಕಾತ್ಯಾಯಿನಿಯು ಚಿನ್ನದ ಮೈ ಬಣ್ಣವನ್ನು ಹೊಂದಿದ್ದು ನಾಲ್ಕು ಕೈಗಳಿರುವ ದೇವಿಯು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಕಮಲದ ಹೂವು ಮತ್ತೆರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ತೋರುತ್ತಿರುತ್ತಾಳೆ. ಇದು ತಾಯಿಯ ಶಕ್ತಿ ಮತ್ತು ಪ್ರೀತಿಯನ್ನು ಪ್ರತೀಕಿಸುವ ಸಂಕೇತವಾಗಿದೆ.

ಪೂಜೆ ಮತ್ತು ಮಹತ್ವ:

  • ನಂಬಿಕೆ ಪ್ರಕಾರ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಸಮೃದ್ಧಿ, ಯಶಸ್ಸು ಮತ್ತು ಸಾಮಾಜಿಕ ಸ್ಥಾನಮಾನ ದೊರೆಯುತ್ತದೆ.

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾತ್ಯಾಯಿನಿ ದೇವಿಯು ಗುರು ಗ್ರಹವನ್ನು ಆಳುವವಳಾಗಿದ್ದು, ಪೂಜೆ ಮಾಡುವ ಮೂಲಕ ಭಕ್ತರು ಗುರು ಗ್ರಹದಿಂದ ಫಲ ಪಡೆಯಬಹುದು.

  • ದಾಂಪತ್ಯ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ; ಮಂತ್ರಪಠನದಿಂದ ಜಾತಕದ ದೋಷ ಪರಿಹಾರವಾಗುತ್ತದೆ.

ಪ್ರಮುಖ ಮಂತ್ರಗಳು:

  • ಓಂ ದೇವಿ ಕಾತ್ಯಾಯಿನ್ಯೈ ನಮಃ

  • ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ

  • ಯಾ ದೇವಿ ಸರ್ವಭೂತೇಷು ಮಾಂ ಕಾತ್ಯಾಯಿನೀ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮೋ ನಮಃ

ಪೂಜೆಯ ಮಹತ್ವ:

ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ಧನಾತ್ಮಕ ಶಕ್ತಿಯನ್ನು ಪಡೆಯುತ್ತಾನೆ. ಹಾಗೂ ದುಷ್ಟ ಭಯ ನಿವಾರಣೆಯಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಮದುವೆಯಾಗದಿರುವವರು ಕಾತ್ಯಾಯಿನಿ ಮಂತ್ರವನ್ನು ಪಠಿಸುವುದರಿಂದ ಜಾತಕದಲ್ಲಿನ ದೋಷ ಪರಿಹಾರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow