ನಾನು‌ ನಿರಪರಾಧಿ ನನ್ನನ್ನು ಪ್ರಕರಣದಿಂದ ಕೈ ಬಿಡಿ: ಡಿಸ್ಚಾರ್ಜ್​ ಅರ್ಜಿ ಸಲ್ಲಿಸಿದ ನಟ ದರ್ಶನ್​!

ಸೆಪ್ಟೆಂಬರ್ 25, 2025 - 16:27
 0  32
ನಾನು‌ ನಿರಪರಾಧಿ ನನ್ನನ್ನು ಪ್ರಕರಣದಿಂದ ಕೈ ಬಿಡಿ: ಡಿಸ್ಚಾರ್ಜ್​ ಅರ್ಜಿ ಸಲ್ಲಿಸಿದ ನಟ ದರ್ಶನ್​!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್, ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಚಾರ್ಜ್ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಇಂದಿನಿಂದ ಕೋರ್ಟ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಆರಂಭಗೊಂಡಿದ್ದು,

ದರ್ಶನ್ ಹಾಗೂ ಅವರ ಸಹಚರರು ಪರಪ್ಪನ ಅಗ್ರಹಾರ ಜೈಲಿನಿಂದ ಹಾಜರಾಗಿದ್ದಾರೆ. ದರ್ಶನ್ ಪರ ವಕೀಲರು, ನಟ ದರ್ಶನ್ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ನಾನು‌ ನಿರಪರಾದಿ ನನ್ನನ್ನು ಪ್ರಕರಣದಿಂದ ಕೈ ಬಿಡಿ ಅಂತ ನಟ ದರ್ಶನ್​ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನನ್ನ ವಿರುದ್ದ ಎಲ್ಲಾ ಸುಳ್ಳು ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ನಾನು ರೇಣುಕಾಸ್ವಾಮಿ ಕೊಲೆ ಕೇಸ್​ ನಲ್ಲಿ ಭಾಗಿಯಾಗಿಲ್ಲ. ಹೀಗಾಗಿ ನನ್ನನ್ನು ಪ್ರಕರಣದಿಂದ ಕೈಬಿಡುವಂತೆ ದರ್ಶನ್​ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
 
ತನ್ನನ್ನು ರೇಣುಕಾಸ್ವಾಮಿ ಪ್ರಕರಣದಿಂದ ಕೈ ಬಿಡುವಂತೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದ್ರೆ ಕೆಲ‌ ದಿನಗಳ ಹಿಂದೆ ಆರೋಪಿಗಳಾದ ದೀಪಕ್ ಹಾಗೂ ಪ್ರದೂಶ್ ಕೂಡ ಅರ್ಜಿ ಸಲ್ಲಿಸಿದ್ದರು. ಇಬ್ಬರು ಆರೋಪಿಗಳ ಅರ್ಜಿಯನ್ನ ಕೋರ್ಟ್ ವಜಾ ಮಾಡಿತ್ತು.
 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow