ನಾನು ಹೋದಲೆಲ್ಲಾ ಜನ ಬರ್ತಾರೆ, ಪ್ರಾಣ ರಕ್ಷಣೆಗಾಗಿ ಗನ್ ಬೇಕು: ಪೊಲೀಸರ ಬಳಿ ದರ್ಶನ್ ಮನವಿ!

ಜನವರಿ 16, 2025 - 14:08
 0  28
ನಾನು ಹೋದಲೆಲ್ಲಾ ಜನ ಬರ್ತಾರೆ, ಪ್ರಾಣ ರಕ್ಷಣೆಗಾಗಿ ಗನ್ ಬೇಕು: ಪೊಲೀಸರ ಬಳಿ ದರ್ಶನ್ ಮನವಿ!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್  ಹಾಗೂ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 

ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿರುವ ದರ್ಶನ್ ತೂಗುದೀಪ ಅವರು ತಮ್ಮ ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ರದ್ದು ಮಾಡಬಾರದು ಎಂದು ಮನವಿ ಮಾಡಿದ್ದಾರೆ. 

ಕೊಲೆ ಅರೋಪದಲ್ಲಿ ಚಿತ್ರನಟ ದರ್ಶನ್ ಬಂಧನವಾದಾಗಲೇ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವ ಪಿಸ್ಟಲ್ ಮುಟ್ಟುಗೋಲು ಹಾಕಿಕೊಂಡು ಗನ್ ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದರು. ಅವರು ಜೈಲಲ್ಲಿದ್ದ ಕಾರಣ ವಿಷಯ ಕೊಂಚ ನೆನೆಗುದಿಗೆ ಬಿದ್ದಿದ್ದು ಸತ್ಯ. ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪಿಸ್ಟಲ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ. 

ಹಾಗಾಗಿ ಅವರ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ 7ರಂದು ನಟನಿಗೆ ಪೊಲೀಸರು ನೋಟೀಸೊಂದನ್ನು ನೀಡಿದ್ದರು. ನೋಟೀಸ್ ಗೆ ಉತ್ತರಿಸಿರುವ ದರ್ಶನ್ ಲೈಸನ್ಸ್ ರದ್ದು ಮಾಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow