ATMಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ: ಓರ್ವ ಸಾವು - ಹಣ ತುಂಬಿದ ಬಾಕ್ಸ್ ಜೊತೆ ಪರಾರಿ

ಜನವರಿ 16, 2025 - 15:51
 0  12
ATMಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ: ಓರ್ವ ಸಾವು - ಹಣ ತುಂಬಿದ ಬಾಕ್ಸ್ ಜೊತೆ ಪರಾರಿ

ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಒಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಗಳು ಹಣದ ಚೀಲದೊಂದಿಗೆ ಪರಾರಿಯಾಗಿದ್ದಾರೆ. ಆರೋಪಿಗಳನ್ನು ತಡೆಯಲು ಸ್ಥಳೀಯರು ಮಾಡಿದ ಸಾಹಸ ವ್ಯರ್ಥವಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ಹೌದು ಬೆಳಗಿನ ಜಾವ 10:55 ರಿಂದ 11 ಗಂಟೆಯ ಅವಧಿಯ ಒಳಗಡೆ ಈ ಕೃತ್ಯ ನಡೆದಿದೆ. ಸಿಎಂಎಸ್‌ ಸಂಸ್ಥೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಾಗ ದರೋಡೆ ನಡೆದಿದೆ. ಈ ದರೋಡೆ ಹಿಂದೆ ಭಾರೀ ಅನುಮಾನ ವ್ಯಕ್ತವಾಗಿದೆ.

ಯಾವುದೇ ಎಟಿಎಂನಲ್ಲಿ (ATM) ಹಣ ತುಂಬುವಾಗ ಗನ್‌ಮ್ಯಾನ್‌ ಕಡ್ಡಾಯವಾಗಿ ಇರಲೇಬೇಕು. ಆದರೆ ಇಲ್ಲಿ ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದಾರೆ. ಈ ವೇಳೆ ಗನ್‌ಮ್ಯಾನ್‌ ಎಲ್ಲಿದ್ದರು ಎಂಬ ಪ್ರಶ್ನೆಗೆ, ಈ ಕೃತ್ಯ ನಡೆಯುವ ಗನ್‌ಮ್ಯಾನ್‌ ಇರಲಿಲ್ಲ. ಗನ್‌ಮ್ಯಾನ್‌ 1 ಗಂಟೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದರು.

ಖಾರದ ಪುಡಿ ಎರಚಿದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು. ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗುಂಡಿನ ದಾಳಿಗೆ ಬಲಿಯಾದ ಗಿರಿ ವೆಂಕಟೇಶ ಮೃತದೇಹವನ್ನು ಬ್ರಿಮ್ಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow