ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ: ಅಷ್ಟಕ್ಕೂ ಏನಾಯ್ತು?

ಅಕ್ಟೋಬರ್ 4, 2025 - 22:01
 0  24
ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ: ಅಷ್ಟಕ್ಕೂ ಏನಾಯ್ತು?

ಕೋಲಾರ:- ಜಿಲ್ಲೆಯ ಮುಳಬಾಗಿಲು  ಯಳಚೇಪಲ್ಲಿ ಗ್ರಾಮದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜರುಗಿದೆ.

ಧನ್ಯಬಾಯಿ (13), ಚೈತ್ರಾಬಾಯಿ (13) ಮೃತ ಬಾಲಕಿಯರು. ಗುರುವಾರ  ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಏಕಾಏಕಿ ನಾಪತ್ತೆಯಾಗಿದ್ದರು. ಈ ಕುರಿತು ಬಾಲಕಿಯರ ಕುಟುಂಬಸ್ಥರು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸದ್ಯ ನಾಪತ್ತೆಯಾಗಿದ್ದ ಬಾಲಕಿಯರು ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿಯಿರುವ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಡಿರಬಹುದು ಅಥವಾ ಬಾಲಕಿಯರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow