ನಿಮ್ಮ ಕೈಯಲ್ಲಿರೋ ಟೈಂ ಸಮಯ ಕೆಡಿಸಬಹುದು.. ಈ ತಪ್ಪು ಆಗದಿರಲಿ

ಜುಲೈ 21, 2025 - 06:38
 0  10
ನಿಮ್ಮ ಕೈಯಲ್ಲಿರೋ ಟೈಂ ಸಮಯ ಕೆಡಿಸಬಹುದು.. ಈ ತಪ್ಪು ಆಗದಿರಲಿ

ಅನೇಕ ಜನರು ಈಗಿನ ಕಾಲದಲ್ಲಿ ವಿವಿಧ ರೀತಿಯ ವಾಚ್​ಗಳನ್ನ ಕಟ್ಟುವ ಅಭ್ಯಾಸವನ್ನ ಹೊಂದಿರುತ್ತಾರೆ. ಈಗಂತೂ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯಾಗಿ ಲಭ್ಯವಿದೆ. ಅದರಲ್ಲೂ ಸ್ಮಾರ್ಟ್​ ವಾಚ್​ಗಳ ಜಮಾನ ಇದು ಎನ್ನಬಹುದು. ಆದರೆ ನಿಮಗೆ ಗೊತ್ತಾ ವಾಚ್​ಗಳಿಗೂ ಸಹ ಜ್ಯೋತಿಷ್ಯದ ನಿಯಮಗಳಿದೆ? ಹೌದು, ಜ್ಯೋತಿಷ್ಯದ ಪ್ರಕಾರ ನಾವು ಧರಿಸುವ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಅವುಗಳ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಅದರಿಂದ ಅನೇಕ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ.

ಕೈಯಲ್ಲಿರುವ ಗಡಿಯಾರ ಕೂಡಾ, ಅದೃಷ್ಟವನ್ನೂ ಬದಲಾಯಿಸಬಹುದು. ಆದರೆ ಈ ಅದೃಷ್ಟಕ್ಕಾಗಿ, ಅದನ್ನು ಸರಿಯಾಗಿ ಧರಿಸುವುದು ಬಹಳ ಮುಖ್ಯ. ಅದಕ್ಕಾಗಿ ಈ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೈಗಡಿಯಾರವನ್ನು  ಧರಿಸುವಾಗ ಈ ವಿಷಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ. 

ಚಿನ್ನದ ಮತ್ತು ಬೆಳ್ಳಿ ಬಣ್ಣದ ಕೈಗಡಿಯಾರಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಉದ್ಯೋಗ ಸಂದರ್ಶನಕ್ಕೆ ಅಥವಾ ಪರೀಕ್ಷೆಗೆ ಹೋಗುವಾಗ ಚಿನ್ನದ ಅಥವಾ ಬೆಳ್ಳಿಯ ಬಣ್ಣದ ಕೈ ಗಡಿಯಾರವನ್ನು ಧರಿಸುವುದು ಒಳ್ಳೆಯದು. 

ಕೆಲವರು ರಾತ್ರಿ ಮಲಗುವ ವೇಳೆ  ಕೈಗಡಿಯಾರಗಳನ್ನು ತೆಗೆದು ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸ ಬಹಳಷ್ಟು ಮಂದಿಗೆ ಇದೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಕೈಗಡಿಯಾರವನ್ನು ಎಂದಿಗೂ ದಿಂಬಿನ ಕೆಳಗೆ ಇಡಬೇಡಿ.

  ದಿಂಬಿನ ಕೆಳಗೆ ವಾಚ್ ಇಟ್ಟು ಮಲಗುವುದರಿಂದ ಮನಸ್ಸಿಗೆ ಋಣಾತ್ಮಕ ಶಕ್ತಿಯನ್ನು ತುಂಬುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ. ಆದುದರಿಂದ ವಾಚ್ ಅನ್ನು ಮಲಗುವ ಸ್ಥಳಕ್ಕಿಂತ ದೂರದಲ್ಲಿ ಇಟ್ಟು ನೆಮ್ಮದಿಯ ನಿದ್ರೆ ಮಾಡಿ, ಸಡಿಲವಾದ ಬೆಲ್ಟ್ ಹೊಂದಿರುವ ಕೈಗಡಿಯಾರವನ್ನು ಎಂದಿಗೂ ಧರಿಸಬೇಡಿ. ಈ ರೀತಿಯ ಗಡಿಯಾರವನ್ನು ಧರಿಸುವುದರಿಂದ ಗಮನ ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗುವುದಿಲ್ಲ. ವಾಚ್ ಪದೇ ಪದೇ ಸಡಿಲವಾಗುವಂತೆ ಮನಸ್ಸಿನ ಏಕಾಗ್ರತೆ ಕೂಡ ಭಂಗವಾಗುತ್ತದೆ ಎನ್ನಲಾಗುತ್ತದೆ. 

ಕೈಗೆ ಫಿಟ್ ಆಗದೇ ಇರುವ ಅಂದರೆ ಲೂಸ್‌ ಇರುವ ವಾಚ್‌ ಧರಿಸಿದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯುವಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಕೈಗಡಿಯಾರವನ್ನು ಧರಿಸುವಾಗ, ಪಟ್ಟಿಯು ಮಣಿಕಟ್ಟಿನ ಮೂಳೆಯ ಬಳಿ ಇರುವಂತೆ ನೋಡಿಕೊಳ್ಳಿ

ಕೈಗಡಿಯಾರವನ್ನು ಧರಿಸುವಾಗ, ಗಡಿಯಾರದ ಡಯಲ್ ತುಂಬಾ ದೊಡ್ಡದಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ದೊಡ್ಡ ಡಯಲ್ ವಾಚ್ ಧರಿಸುವುದರಿಂದ  ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ , ತೊಂದರೆಗಳು ಉಂಟಾಗಬಹುದು. ಹಾಗೆಂದು ಅತ್ಯಂತ ಸಣ್ಣ ಡಯಲ್ ಹೊಂದಿರುವ ಗಡಿಯಾರವನ್ನು ಧರಿಸಬೇಡಿ

ಯಾವ ಕೈಗೆ ಗಡಿಯಾರ ಧರಿಸಬೇಕೆಂಬ ನಿಯಮವಿಲ್ಲ.  ಅನುಕೂಲಕ್ಕೆ ತಕ್ಕಂತೆ ಬಲಗೈ ಅಥವಾ ಎಡಗೈಯಲ್ಲಿ ವಾಚ್ ಧರಿಸಬಹುದು. ಧರಿಸದಿದ್ದರೂ ಅದರಿಂದ ಸಮಸ್ಯೆ ಏನಿಲ್ಲ. ಆದರೆ ಧರಿಸುವಾಗ ಸರಿಯಾದ ರೀತಿಯಲ್ಲಿ ಧರಿಸುವುದು ಉತ್ತಮ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow