ನಿಮ್ಮ ಸೆ*** ವಿಡಿಯೋ ಇದೆ: ಆನಂದ್ ಗುರೂಜಿಗೆ ಹಣಕ್ಕೆ ಬ್ಲಾಕ್ ಮೇಲ್-ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ 'FIR'

ಮೇ 15, 2025 - 21:02
 0  17
ನಿಮ್ಮ ಸೆ*** ವಿಡಿಯೋ ಇದೆ: ಆನಂದ್ ಗುರೂಜಿಗೆ ಹಣಕ್ಕೆ ಬ್ಲಾಕ್ ಮೇಲ್-ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ 'FIR'

ಬೆಂಗಳೂರು: ಕಳೆದ ವರ್ಷ ಹನಿಟ್ರ್ಯಾಪ್ ಪ್ರಕರಣದಲ್ಲಿ ದಿವ್ಯಾ ವಸಂತ ಬಂಧನವಾಗಿತ್ತು. ಇಂದಿರಾ ನಗರದ ಬ್ಯೂಟಿ ಪಾರ್ಲರ್‌ನಲ್ಲಿ ವಿಡಿಯೋ ಮಾಡಿ ಹಲವರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಪಾರ್ಲರ್ ಮಾಲೀಕರು ನೀಡಿದ್ದ ದೂರಿನ ಮೇರೆಗೆ ದಿವ್ಯಾ ವಸಂತರನ್ನ ಬೆಂಗಳೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿತ್ತು.

ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಆನಂದ ಗುರೂಜಿ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಹಾಗೂ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. 

ಈ ಸಂಬಂಧ ಆನಂದ ಗುರೂಜಿ ಅವರು ಬೆಂಗಳೂರಿನ ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಸಂಬಂಧ ಪೊಲೀಸರು, ಕೃಷ್ಣಮೂರ್ತಿ(ಎ1) ಹಾಗೂ ದಿವ್ಯಾ ವಸಂತ (ಎ2) ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆನಂದ ಗುರೂಜಿ ವಿಡಿಯೋ ಹಾಗೂ ಜಮೀನು ಖರೀದಿ ಪ್ರಕರಣ ಸಂಬಂಧ ಕೋರ್ಟ್​ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಸಹ ಈ ಪ್ರಕರಣ ಸಂಬಂಧ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ.

ವಿಡಿಯೋ ಇದೆ ಎಂದು ಪ್ರಖ್ಯಾತ ಆನಂದ್ ಗುರೂಜಿಗೆ ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಕೋರ್ಟ್​ನಿಂದ ತಡೆಯಾಜ್ಞೆ ತಂದರೂ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ವಿನಯ್ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಚಿಕ್ಕಜಾಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಹಲವಾರು ಯುಟ್ಯೂಬ್ ಚಾನೆಲ್ ಗಳ ಮೂಲಕ ಮಾನಹಾನಿ ಮಾಡಿದ್ದಾರೆ. ಮುಖವಾಡ, ಸಾಮ್ರಾಟ್ ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲೂ ಚಾರಿತ್ರ್ಯ ತೇಜೋವಧೆ ಮಾಡಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕೃಷ್ಣಮೂರ್ತಿ ಎ1 ಆರೋಪಿಯಾಗಿದ್ದರೆ, ದಿವ್ಯಾ ವಸಂತ ಎ2 ಆರೋಪಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow