ನಿರುದ್ಯೋಗಿಗಳ ಗಮನಕ್ಕೆ: ರೈಲ್ವೆ ಇಲಾಖೆಯಲ್ಲಿ ಸಾವಿರಾರು ಹುದ್ದೆ ಖಾಲಿ, ಕೂಡಲೇ ಅಪ್ಲೈ ಮಾಡಿ!

ದೇಶಾದ್ಯಂತ ಸಾವಿರಾರು ಟೆಕ್ನೀಷಿಯನ್ನಗಳ ನೇಮಕಾತಿಗಾಗಿ ಭಾರತೀಯ ರೈಲ್ವೆ ಇಲಾಖೆಯ ಅಧೀನದಲ್ಲಿರುವ ನೇಮಕಾತಿ ಮಂಡಳಿಯು ಅಧಿಸೂಚನೆ ಪ್ರಕಟಿಸಿದೆ. ಹೀಗಾಗಿ ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈಲ್ವೆ ನೇಮಕಾತಿ ಮಂಡಳಿ ವತಿಯಿಂದ ಈ ನೇಮಕಾತಿ ನಡೆಯಲಿದ್ದು ಒಟ್ಟು 14,298 ಹುದ್ದೆಗಳು ಖಾಲಿ ಇವೆ. ಈ ಹಿಂದೆಯೂ ಈ ನೇಮಕಾತಿಗಾಗಿ 9 ಮಾರ್ಚ್, 2024 ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಅಕ್ಟೋಬರ್, 2024 ದಿನಾಂಕದಿಂದ ಪುನಃ ಅವಕಾಶ ನೀಡಲಾಗಿದೆ.
16 ಅಕ್ಟೋಬರ್, 2024 ಕೊನೆಯ ದಿನಾಂಕವಾಗಿದೆ. ಪರೀಕ್ಷಾ ಪ್ರವೇಶ ಕಾರ್ಡ್ ನವೆಂಬರ್ ತಿಂಗಳಲ್ಲಿ ನಿರೀಕ್ಷಿಸಲಾಗಿದೆ. ಇನ್ನು ನಿರೀಕ್ಷಿತ ಪರೀಕ್ಷಾ ದಿನಾಂಕ ಡಿಸೆಂಬರ್ ತಿಂಗಳಲ್ಲಿ ಬರುವ ಸಾಧ್ಯತೆಯಿದೆ.
RRB ತಂತ್ರಜ್ಞರ ಹುದ್ದೆ ನೇಮಕಾತಿಗಾಗಿ ಈ ಹೆಚ್ಚಳ ಅಧಿಸೂಚನೆ ಹೆಚ್ಚಿನ ಮಾಹಿತಿಯು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ rrbapply.gov.in ನಲ್ಲಿ ಲಭ್ಯವಿದೆ. RRB ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ತಂತ್ರಜ್ಞ ಗ್ರೇಡ್ I ಮತ್ತು ಗ್ರೇಡ್ III ಹುದ್ದೆಗಳಿಗೆ 14,298 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಈ ಹಿಂದೆ ಅಂದರೆ ಕಳೆದ್ ಮಾರ್ಚ್ ತಿಂಗಳಲ್ಲಿ ಘೋಷಿಸಲಾದ 9,144 ಹುದ್ದೆಗಳಿಗಿಂತ ಇದು ಗಮನಾರ್ಹ ಹೆಚ್ಚಳವಾಗಿದೆ. ಅದರಿಂದ ಉದ್ಯೋಗಾವಕಾಶವೂ ಹೆಚ್ಚಳವಾಗಿದೆ ಎಂದು ಭಾವಿಸಬಹುದಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






