ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ವಿಶ್ವಸಂಸ್ಥೆಯಲ್ಲಿದೆ ಭರ್ಜರಿ ಉದ್ಯೋಗ! Work From home ಕೂಡ ಇದೆ!

ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ವಿಶ್ವಸಂಸ್ಥೆಯಲ್ಲಿ ಹಲವು ಭರ್ಜರಿ ಉದ್ಯೋಗ ಖಾಲಿ ಇದೆ. ವಿಶ್ವಸಂಸ್ಥೆಯು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪ್ರತಿ ವರ್ಷ ಲಕ್ಷಾಂತರ ಜನರು ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ನೀವು ಕೂಡ ಪ್ರತಿಷ್ಠಿತ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಬಹುದು.
ಪ್ರಪಂಚದ ಹಲವು ಭಾಗಗಳಲ್ಲಿ ವಿಶ್ವಸಂಸ್ಥೆಯ ಕಚೇರಿಗಳಿವೆ. ಪ್ರಧಾನ ಕಚೇರಿಯು ನ್ಯೂಯಾರ್ಕ್‌ನಲ್ಲಿದೆ. ವಿವಿಧ ಭಾಗಗಳಲ್ಲಿರುವ ಕಚೇರಿಗಳಲ್ಲಿ ಅನೇಕರು ಉದ್ಯೋಗದಲ್ಲಿದ್ದಾರೆ. UNನಲ್ಲಿ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಸಲಹಾ, ಇಂಟರ್ನ್‌ಶಿಪ್ ಮತ್ತು ಸ್ವಯಂಸೇವೆ ಸೇರಿವೆ. ವಿಶ್ವಸಂಸ್ಥೆಗೆ ಸ್ವಯಂಸೇವಕರ ಅಗತ್ಯವಿದೆ. ಇದಕ್ಕಾಗಿ ಅದು ಆಗಾಗ ಆನ್‌ಲೈನ್ ಮೂಲಕ ಖಾಲಿ ಹುದ್ದೆಗಳಿಗೆ ಪ್ರಕಟಣೆ ಹೊರಡಿಸುತ್ತದೆ. ಇನ್ನೊಂದು ವಿಚಾರ ಏನೆಂದರೆ ಆನ್‌ಲೈನ್ ಸ್ವಯಂಸೇವಕ ಕೆಲಸವನ್ನು ನೀವು ಮನೆಯಿಂದಲೂ ಮಾಡಬಹುದು.
UN ಆನ್‌ಲೈನ್ ಸ್ವಯಂಸೇವಕ ಕಾರ್ಯಕ್ರಮದ ದೊಡ್ಡ ಪ್ರಯೋಜನ ಏನೆಂದರೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರಲ್ಲ. ಆಯ್ಕೆಯಾದರೆ ವಿವಿಧ ಸಂಸ್ಥೆಗಳೊಂದಿಗೆ, ದೊಡ್ಡ ದೊಡ್ಡ ಪ್ರಾಜೆಕ್ಟ್ಗಳ ಜೊತೆಗೆ ಕೆಲಸ ಮಾಡುವ ಅವಕಾಶ ಸಿಗಲಿದೆ. ಆನ್‌ಲೈನ್ ಮೂಲಕ ನಡೆಯುವ ಸ್ವಯಂಸೇವಕ ಕೆಲಸವು ನಿಮ್ಮ ಅನೂಲಕ್ಕೆ ತಕ್ಕಂತೆ ಇರಲಿದೆ. ಅಂದರೆ ವೈಯಕ್ತಿಕ ವೇಳಾಪಟ್ಟಿಯಲ್ಲಿ ನೀವು ಕೆಲಸ ಮಾಡಬಹುದು. ಇದರಿಂದ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಗೆ ಮತ್ತು ಅಂತರರಾಷ್ಟ್ರೀಯ ಅನುಭವ ಪಡೆಯಲು ಅವಕಾಶ ಸಿಗಲಿದೆ.
UNESCO, WHO, UNICEF, ಮತ್ತು WFP ನಂತಹ ಹಲವಾರು ವಿಶ್ವಸಂಸ್ಥೆಯ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ. ನೀವು ಆನ್‌ಲೈನ್ ಸ್ವಯಂಸೇವಕರಾಗಲು ಬಯಸಿದರೆ, ನೀವು app.unv.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಸ್ವಯಂಸೇವಕ ಹುದ್ದೆಗಳ ಕುರಿತು ಮಾಹಿತಿಯನ್ನು ನೀವು ಇಲ್ಲಿ ಕಾಣಬಹುದು. ಅರ್ಜಿ ಸಲ್ಲಿಸುವಾಗ ನೀವು ಆನ್‌ಲೈನ್ ಸ್ವಯಂಸೇವಕ ಆಯ್ಕೆಯನ್ನು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅಗತ್ಯವಿರುವ ಅರ್ಹತೆಯನ್ನು ಪರಿಶೀಲಿಸಿ.
ನಿಮ್ಮ ಪ್ರತಿಕ್ರಿಯೆ ಏನು?






