ನೀವು ಕಂಪ್ಯೂಟರ್ ನಲ್ಲಿ ಕೆಲಸ ಮಾಡ್ತಿದ್ದೀರಾ!? ಹಾಗಿದ್ರೆ ಇನ್ನೂ ಎಲ್ಲವೂ ಸುಲಭ, ನಿಮಗಾಗಿ ಬರ್ತಿದೆ AI ಏಜೆಂಟ್..!

ನವೆಂಬರ್ 20, 2024 - 21:19
ನವೆಂಬರ್ 19, 2024 - 14:47
 0  12
ನೀವು ಕಂಪ್ಯೂಟರ್ ನಲ್ಲಿ ಕೆಲಸ ಮಾಡ್ತಿದ್ದೀರಾ!? ಹಾಗಿದ್ರೆ ಇನ್ನೂ ಎಲ್ಲವೂ ಸುಲಭ, ನಿಮಗಾಗಿ ಬರ್ತಿದೆ AI ಏಜೆಂಟ್..!

ನೀವು ನಿತ್ಯ ಕಂಪ್ಯೂಟರ್ ನಲ್ಲಿ ಕೆಲಸ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿ ನಿಮಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ. ಕಂಪ್ಯೂಟರ್​ಗಳಲ್ಲಿ ನಿಮ್ಮ ಕೆಲಸ ಇನ್ನಷ್ಟು ಸುಲಭ ಮಾಡಲು ಬರ್ತಿದೆ AI ಏಜೆಂಟ್. 

ಹೌದು, ಎಲ್ಲವೂ ಅಂದುಕೊಂಡಂತೆಯಾದರೆ 2025 ಜನವರಿಯಲ್ಲಿ AI ಏಜೆಂಟ್​ ತಂತ್ರಜ್ಞಾನ ಜಗತ್ತಿಗೆ ಪ್ರವೇಶ ಮಾಡಲಿದೆ.

ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳನ್ನು ಕ್ರಿಯೇಟ್ ಮಾಡಲು ಡೆವಲಪರ್‌ಗಳು ಬಳಸಬಹುದಾದ ಸ್ಥಳೀಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಮೂಲಕ AI ಏಜೆಂಟ್‌ಗಳನ್ನು ಪ್ರವೇಶಿಸಲು OpenAI ಪ್ಲಾನ್ ಮಾಡಿದೆ.

OpenAI ಹೊಸ AI ಏಜೆಂಟ್ ಅನ್ನು ‘ಆಪರೇಟರ್’ ಎಂದು ಕರೆದಿದೆ. ಅದು ಕಂಪ್ಯೂಟರ್‌ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಅದರ ಆಪರೇಟ್ ಗೊತ್ತಿರೋ ಬಳಕೆದಾರರು AI ಏಜೆಂಟ್‌ಗೆ ಕೋಡ್ ಬರೆಯುವುದು ಅಥವಾ ಟಿಕೆಟ್‌ಗಳನ್ನು ಕಾಯ್ದಿರಿಸುವಂತಹ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯ ಆಗಲಿದೆ. ಇವು ಸೀಮಿತವಾದ ಹಾಗೂ ವಿಶೇಷ ಜ್ಞಾನ ಹೊಂದಿರುವ ಚಿಕ್ಕದಾದ AI ಮಾದರಿಗಳಾಗಲಿವೆ. ಕೀಸ್ಟ್ರೋಕ್ಸ್​, ಬಟನ್ ಕ್ಲಿಕ್ಸ್​ ಮತ್ತು ಇತರೆ ಕೆಲಸಗಳನ್ನು ಮಾಡಲು ನಿರ್ದಿಷ್ಟ ಸಾಫ್ಟ್‌ವೇರ್ ಬಳಸಬಹುದು ಎನ್ನಲಾಗಿದೆ. ಈ ಮೂಲಕ ನೀವು ಇನ್ನಷ್ಟು ನಿಖರತೆ ಮತ್ತು ವೇಗವಾಗಿ ಕೆಲಸ ಮಾಡಬಹುದಾಗಿದೆ.

ಅಂದರೆ AI ಏಜೆಂಟ್ ಕೇವಲ ಬ್ರೌಸರ್ ನಿಯಂತ್ರಿಸುವುದಲ್ಲದೇ ನಿಮ್ಮ ಕಂಪ್ಯೂಟರ್ ಅನ್ನೂ ಕೂಡ ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳಲಿದೆ. ನಿಮ್ಮ ಕಂಪ್ಯೂಟರ್​ನಲ್ಲಿ ನಿಮಗಾಗಿ ಆಪರೇಟ್ ಮಾಡಬಹುದಾದ ಏಜೆಂಟ್ ಅಭಿವೃದ್ಧಿಪಡಿಸಲು ಕಂಪನಿಗಳು ಪ್ರಯತ್ನಿಸುತ್ತಿವೆ. ಇದರಲ್ಲಿ ಯಶಸ್ವಿಯಾದರೆ ಕಂಪ್ಯೂಟರ್​ನಲ್ಲಿ ಎಲ್ಲಾ ಕೆಲಸದ ಅಪ್ಲಿಕೇಶನ್‌ಗಳನ್ನು ತೆರೆಯುವುದು. ಮತ್ತು ಅವುಗಳನ್ನು ಸ್ಕ್ರೀನ್ ಮೇಲೆ ತೋರಿಸಿ ಕಂಪ್ಯೂಟರ್ ಹಾಗೂ ನಿಮ್ಮೊಂದಿಗೆ ಏಜೆಂಟ್ ಆಗಿ ಸಂಹವನ ನಡೆಸಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow