ನೀವು ಕೂಡ ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ಇದು ಅಪಾಯವಾ?

ಸೆಪ್ಟೆಂಬರ್ 16, 2025 - 07:01
 0  21
ನೀವು ಕೂಡ ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ಇದು ಅಪಾಯವಾ?

ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯಕರ, ರುಚಿಕರವಾದ ಆಹಾರವನ್ನು ತಯಾರಿಸುವಲ್ಲಿ ಅಡುಗೆ ಪಾತ್ರೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ನಿಮ್ಮ ಆಹಾರವನ್ನು ನೀವು ಹೇಗೆ ಮತ್ತು ಯಾವ ಪಾತ್ರೆಗಳಲ್ಲಿ ಬೇಯಿಸುತ್ತೀರಿ ಎಂಬುದು ಬಹಳ ಮುಖ್ಯ. ಅಡುಗೆಗಾಗಿ ಸರಿಯಾದ ಪಾತ್ರೆಗಳನ್ನು ಆರಿಸುವುದು ಬಹಳ ಮುಖ್ಯ. ಅಡುಗೆಗೆ ಬಳಸುವ ಬಹುತೇಕ ಪಾತ್ರೆಗಳು ವಿಷಕಾರಿ ರಾಸಾಯನಿಕಗಳಿಂದ ತುಂಬಿದ್ದು ಅದು ಆಹಾರದೊಳಗೆ ಸೇರಿಕೊಂಡು ಆಹಾರವನ್ನು ಕಲುಷಿತಗೊಳಿಸುತ್ತದೆ ಎಂಬುದು ನಿಮಗೆ ತಿಳಿದಿದೆ.

ಅಡುಗೆ ಮನೆಯ ಪಾತ್ರೆಗಳ ವಿಚಾರವಾಗಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಾನ್-ಸ್ಟಿಕ್ ಪಾತ್ರೆಗಳು ಮತ್ತು ಉಕ್ಕಿನ ಪಾತ್ರೆಗಳು ಹೀಗೆ ಮುಂತಾದ ಹಲವು ರೀತಿಯ ಅಡುಗೆ ಮನೆಯ ಪಾತ್ರೆಗಳು ಚಲಾವಣೆಯಲ್ಲಿ ಇರುವುದರಿಂದ, ಅಡುಗೆ ಮಾಡಲು ಯಾವುದನ್ನು ಬಳಸುವುದು ಸೂಕ್ತ ಎಂದು ಸಾಕಷ್ಟು ಮಂದಿ ಗೊಂದಲಕ್ಕೊಳಗಾಗುತ್ತಾರೆ. ಆದರೆ ಈಗ ಹಿತ್ತಾಳೆ ಪಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದೆ. 

ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸುತ್ತಿದ್ದ ಜನ ಈಗ ಮತ್ತೆ ಹಿತ್ತಾಳೆವ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಅದೇ ರೀತಿ ಕಬ್ಬಿಣ ಮತ್ತು ಮಣ್ಣಿನ ಪಾತ್ರೆಗಳನ್ನು ಸಹ ಹೆಚ್ಚಾಗಿ ಬಳಸಲು ಪ್ರಾರಂಭಿಸಿದ್ದಾರೆ. ಅಷ್ಟಕ್ಕೂ ಹಿತ್ತಾಳೆ ಪಾತ್ರೆ ನಿಜಕ್ಕೂ ಅಡುಗೆ ಮಾಡಲು ಸೂಕ್ತವಾಗಿದೆಯೇ? ಇದರಿಂದ ಅಡುಗೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿದೆ ಅಂತ ತಿಳಿಯೋಣ ಬನ್ನಿ.

ಹಿತ್ತಾಳೆ ಪಾತ್ರೆಗಳನ್ನು ತಾಮ್ರ ಮತ್ತು ಸತುವಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹಿಂದಿನ ಕಾಲದ ರಾಜಮನೆತನದವರು ಮತ್ತು ಶ್ರೀಮಂತರಿಗೆ ಹಿತ್ತಾಳೆ ಪಾತ್ರೆಗಳ ಪ್ರಯೋಜನಗಳ ಬಗ್ಗೆ ತಿಳಿದಿತ್ತು. ಹಾಗಾಗಿ ಇವುಗಳಲ್ಲಿ ಹೆಚ್ಚಾಗಿ ಅಡುಗೆ ಮಾಡುತ್ತಿದ್ದರು.

ಅಲ್ಲದೇ ಹಿತ್ತಾಳೆಯ ಪಾತ್ರೆಯಲ್ಲಿ ಬೇಯಿಸಿದ ಆಹಾರವು ದೀರ್ಘಕಾಲದವರೆಗೆ ಬಿಸಿಯಾಗಿರುತ್ತದೆ. ಏಕೆಂದರೆ ಈ ಲೋಹವು ಶಾಖವನ್ನು ಆಕರ್ಷಿಸುತ್ತದೆ ಮತ್ತು ಆಹಾರವನ್ನು ದೀರ್ಘಕಾಲದವರೆಗೆ ಬಿಸಿಯಾಗಿಡಲು ಸಹಾಯ ಮಾಡುತ್ತದೆ. 

ಅಲ್ಲದೇ, ಅಂದಿನ ಕಾಲದಲ್ಲಿ ರೆಫ್ರಿಜರೇಟರ್‌ಗಳು ಇಲ್ಲದೇ ಇದ್ದಿದ್ದರಿಂದ, ಈ ಹಿತ್ತಾಳೆಯ ಪಾತ್ರೆಗಳು ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಲು, ಜೊತೆಗೆ ಆಹಾರವನ್ನು ಬಿಸಿಯಾಗಿಡಲು ಬಹಳ ಉಪಯುಕ್ತವಾಗಿದೆ.ಅಲ್ಲದೇ ಈ ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ತರಕಾರಿಗಳ ಪೋಷಕಾಂಶಗಳು ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಹಿತ್ತಾಳೆ ಪಾತ್ರೆಯ ಲೋಹವು ಕ್ಷಾರೀಯವಾಗಿರುವುದರಿಂದ ಅದರಲ್ಲಿ ಬೇಯಿಸಿದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಇದು ದೇಹದ pH ಮಟ್ಟವನ್ನು ಸಹ ಸಮತೋಲನಗೊಳಿಸುತ್ತದೆ. ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಹಿತ್ತಾಳೆ ಪಾತ್ರೆ ಉತ್ತಮ ಪರ್ಯಾಯವಾಗಿದೆ.

ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ತಾಮ್ರ ಮತ್ತು ಸತುವುಗಳಂತಹ ಖನಿಜಗಳು ನಮಗೆ ಸಿಗುತ್ತವೆ. ಇವು ನಮ್ಮ ಆಹಾರದಿಂದ ಹೆಚ್ಚು ಸಿಗುವುದಿಲ್ಲ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ, ಇದರಲ್ಲಿರುವ ತಾಮ್ರದ ಅಂಶವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ಚರ್ಮಕ್ಕೆ ಒಡ್ಡಿಕೊಂಡಾಗ ಹೊಳಪನ್ನು ನೀಡುತ್ತದೆ. ಸತುವಿನ ಉಪಸ್ಥಿತಿಯು ಕೂದಲಿನ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ.

ಹಿತ್ತಾಳೆಯಲ್ಲಿರುವ ಸತುವಿನ ಅಂಶವು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಹಾಗಾಗಿ ನಮ್ಮ ಪೂರ್ವಜರು ನೀರನ್ನು ಹಿತ್ತಾಳೆ ಪಾತ್ರೆ ಅಥವಾ ಬಿಂದಿಗೆಯಲ್ಲಿ ಸಂಗ್ರಹಿಸಿ ಕುಡಿಯುತ್ತಿದ್ದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow