ಪರ ಯುವತಿಯೊಂದಿಗೆ ಪತಿ ಲವ್ವಿಡವ್ವಿ: ಮನನೊಂದು ಜೀವವನ್ನೇ ಕಳೆದುಕೊಂಡ ಪತ್ನಿ!

ಎಪ್ರಿಲ್ 8, 2025 - 21:02
 0  11
ಪರ ಯುವತಿಯೊಂದಿಗೆ ಪತಿ ಲವ್ವಿಡವ್ವಿ: ಮನನೊಂದು ಜೀವವನ್ನೇ ಕಳೆದುಕೊಂಡ ಪತ್ನಿ!

ಬೆಂಗಳೂರು:- ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಪತಿ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. 

ಬಾಹರ್ ಅಸ್ಮಾ (29 ) ನೇಣಿಗೆ ಶರಣಾದ ಮಹಿಳೆ. ಕಳೆದ ಎರಡು ವರ್ಷಗಳ ಹಿಂದೆ ಬಾಹರ್ ಅಸ್ಮಾ, ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆದರೆ ಪತಿ ಬಶೀರ್ ವುಲ್ಲಾ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡ ಪತ್ನಿ ಬಾಹರ್ ಅಸ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. 

ಮೃತ ಬಾಹರ್ ಅಸ್ಮಾ ಅವರ ಕುಟುಂಬಸ್ಥರಿಂದ ನನ್ನ ಮಗಳ ಕೊಲೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪತಿ ಬಶೀರ್ ವುಲ್ಲಾ ವಿರುದ್ಧ ಅಸ್ಮಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow