ಬೆಂಕಿ ಅನಾಹುತ: ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಪುತ್ರನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

ಎಪ್ರಿಲ್ 8, 2025 - 16:14
 0  11
ಬೆಂಕಿ ಅನಾಹುತ: ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಪುತ್ರನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

ಅಗ್ನಿ ಅವಘಡದಲ್ಲಿ DCM ಪವನ್ ಕಲ್ಯಾಣ್ ಮಗನಿಗೆ ಗಂಭೀರ ಗಾಯವಾಗಿರುವ ಘಟನೆ ಸಿಂಗಾಪುರದಲ್ಲಿ ಜರುಗಿದೆ. ವಿಷಯ ತಿಳಿಯುತ್ತಿದ್ದಂತೆ ಸಿಂಗಾಪುರಕ್ಕೆ 'ಪವರ್ ಸ್ಟಾರ್‌' ಪವನ್ ಕಲ್ಯಾಣ್ ತೆರಳಿದ್ದಾರೆ 

ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ದಂಪತಿಯ ಪುತ್ರನಾಗಿರುವ 8 ವರ್ಷದ ಮಾರ್ಕ್ ಶಂಕರ್ ಸಿಂಗಾಪುರದ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಅವರು ತಕ್ಷಣವೇ ಸಿಂಗಾಪುರಕ್ಕೆ ಹೊರಟಿದ್ದಾರೆ.

ಮಾರ್ಕ್ ಶಂಕರ್ ಪವನೋವಿಚ್ ಸಿಂಗಾಪುರದಲ್ಲಿ ಓದುತ್ತಿದ್ದಾನೆ. ಆತ ವ್ಯಾಸಂಗ ಮಾಡುತ್ತಿರುವ ಶಾಲೆಗೆ ಬೆಂಕಿ ಬಿದ್ದಿದ್ದು, ಈ ಅವಘಡದಲ್ಲಿ ಮಾರ್ಕ್ ಶಂಕರ್‌ನ ಕಾಲು ಮತ್ತು ಕೈಗಳಿಗೆ ಬೆಂಕಿ ತಗುಲಿ, ಗಾಯವಾಗಿದೆ. ಅಲ್ಲದೆ, ದಟ್ಟ ಹೊಗೆ ಆವರಿಸಿದ್ದರಿಂದ ಮಾರ್ಕ್ ಉಸಿರಾಡಲು ಕೂಡ ತುಂಬ ಕಷ್ಟಪಟ್ಟಿದ್ದಾನೆ. ಮಾರ್ಕ್ ಶಂಕರ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow