ಪ್ರತಿಷ್ಟಿತ ಇನ್ಫೋಸಿಸ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಅರ್ಹರಿಗೆ ಇದು ಬಂಪರ್ ಆಫರ್!

ಪ್ರತಿಷ್ಟಿತ ಇನ್ಫೋಸಿಸ್ ನಲ್ಲಿ ಹಲವು ಉದ್ಯೋಗಗಳು ಖಾಲಿ ಇದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ 20,000ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಭಾರತದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಾಗಿರುವ ಇನ್ಫೋಸಿಸ್ ಸಂಸ್ಥೆ 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
2026ರ ವರ್ಷದಲ್ಲಿ ಇನ್ಫೋಸಿಸ್ ದೊಡ್ಡ ಮಟ್ಟದಲ್ಲಿ ನೇಮಕಾತಿ ಮಾಡುವ ಯೋಜನೆಯಲ್ಲಿದೆ. Q3 ಹಣಕಾಸು ಯೋಜನೆ ರೂಪಿಸಲಾಗಿದೆ ಎಂದು ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಪೊರೇಟ್‌ನಲ್ಲಿ ಜನವರಿ-ಸೆಪ್ಟೆಂಬರ್ವರೆಗೆ ತಿಂಗಳುಗಳನ್ನು ವಿಂಗಡಿಸಿ Q3 ಎಂದು ಕರೆಯಲಾಗುತ್ತದೆ.
ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ಸೇವೆಗಳ ರಫ್ತುದಾರ ಆಗಿರುವ ಇನ್ಫೋಸಿಸ್, ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆಯಿಂದ ತನ್ನ ಆದಾಯದ ಶೇಕಡ 80ರಷ್ಟಕ್ಕಿಂತ ಪ್ರತಿಶತಕ್ಕಿಂತ ಹೆಚ್ಚು ಹಣ ಗಳಿಸುತ್ತದೆ. ಮುಂದಿನ ದಿನಗಳಲ್ಲಿ ಕಂಪನಿಯನ್ನು ಇನ್ನಷ್ಟು ಬಲಯುತವಾಗಿ ಮಾಡಲು ಹೊಸಬರ ಅವಶ್ಯಕತೆ ಇದೆ.
ಹಲವು ಕಂಪನಿಗಳು ನಿಧಾನಗತಿಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿಬೆ. ಅದರಂತೆಯೇ ಇನ್ಫೋಸಿಸ್ ಸಹ 20,000ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






