ಪ್ರಿಯಕರನ ಜೊತೆ ಸೇರಿ ಗಂಡನ ಬರ್ಬರ ಹತ್ಯೆ: ಮುದ್ದಿನ ಹೆಂಡ್ತಿಯ ಖತರ್ನಾಕ್ ಪ್ಲ್ಯಾನ್ ಹೇಗಿತ್ತು?

ಕೊಪ್ಪಳ:- ಕೊಪ್ಪಳ ತಾಲೂಕಿನ ಬುದಗೂಂಪದಲ್ಲಿ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಬಳಿಕ ನಾಗರ ಪಂಚಮಿ ಹಬ್ಬ ಮಾಡಿದ್ದ ವಿಲಕ್ಷಣ ಘಟನೆ ಜರುಗಿದೆ.
ಕೊಲೆಯಾದ ಗಂಡನನ್ನು 38 ವರ್ಷದ ದ್ಯಾಮಣ್ಣ ವಜ್ರಬಂಡಿ ಎನ್ನಲಾಗಿದೆ. ನೇತ್ರಾವತಿ ಚಟ್ಟಕಟ್ಟಿದ ಪತ್ನಿ. ತನ್ನ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 25ರಂದು ಪತ್ನಿ ನೇತ್ರಾವತಿ ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ಗಂಡನನ್ನ ಕೊಲೆ ಮಾಡಿದ್ದಳು. ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ಶ್ಯಾಮಣ್ಣ ಜೊತೆ ಸೇರಿಕೊಂಡು ಪೆಟ್ರೋಲ್ ಸುರಿದು ಶವ ಸುಟ್ಟಿದ್ದರು.
ಕೊಲೆ ನಂತರ ತನ್ನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ದ್ಯಾಮಣ್ಣನ ಮನೆಯವರು ಗಂಡನನ್ನ ಕೇಳಿದ್ರೆ ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ನೇತ್ರಾವತಿ ಹಾಗೂ ಕೊಲೆ ಮಾಡಿದ ಪ್ರೀಯಕರ ಶ್ಯಾಮಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ನಿಮ್ಮ ಪ್ರತಿಕ್ರಿಯೆ ಏನು?






