ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!
ನ್ಯೂಜೆರ್ಸಿ: ಫುಟ್ಬಾಲ್ನ ಚರಿತ್ರೆಯಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಠಿಸಿರುವ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ, ಅಂತರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಅಸಿಸ್ಟ್ ನೀಡಿದ ಆಟಗಾರರಾಗಿ ಇತಿಹಾಸ ನಿರ್ಮಿಸಿದ್ದಾರೆ.
ಪೋರ್ಟೊರಿಕೊ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 6-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೆಸ್ಸಿ ಎರಡು ಅಸಿಸ್ಟ್ಗಳನ್ನು ನೀಡಿದ್ದು, ಅವರ ಅಂತರಾಷ್ಟ್ರೀಯ ಅಸಿಸ್ಟ್ಗಳ ಸಂಖ್ಯೆ 60ಕ್ಕೆ ಏರಿದೆ.
ಇದರೊಂದಿಗೆ ಮೆಸ್ಸಿ, ಬ್ರೆಜಿಲ್ನ ನೇಮರ್ (58 ಅಸಿಸ್ಟ್) ಮತ್ತು ಅಮೆರಿಕದ ಲ್ಯಾಂಡನ್ ಡೊನೊವನ್ (58 ಅಸಿಸ್ಟ್) ಅವರನ್ನು ಹಿಂದಿಕ್ಕಿ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?