ಬಿಗ್ ಮನೆಯಲ್ಲಿ ನಾಮಿನೇಷನ್ ಬಿಸಿ: ಚೂರಿ ಹಾಕಿದ ಸ್ಪರ್ಧಿಗಳಿಗೆ ತಿರುಗೇಟು ಕೊಟ್ಟ ಐಶು!

ಬಿಗ್ ಬಾಸ್ ಸೀಸನ್ 11 ಇತ್ತೀಚೆಗೆ ವೀಕ್ಷಕರಿಗೆ ಹೆಚ್ಚು ಮನರಂಜನೆ ಕೊಡುತ್ತಿದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಂತೆ, ಈ ವಾರವೂ ನಡೆದಿದ್ದು, ಸ್ಪರ್ಧಿಗಳ ನಡುವೆ ನೇರ ನೇರ ಟಾಕ್ ಫೈಟ್ ನಡೆದಿದೆ.
ವಾರಗಳು ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಜಗಳ ಹೆಚ್ಚಾಗುತ್ತಿದೆ. ನಾನೇ ಗೆಲ್ಲಬೇಕು ಎಂಬ ಹಂಬಲ ಕೂಡ ಹೆಚ್ಚಾಗುತ್ತಿದೆ. ನಾಮಿನೇಷನ್‌ಗಳು ಸೀರಿಯಸ್ ಆಗುತ್ತಿದೆ. ಈ ವಾರ ಬೆನ್ನಿಗೆ ಚೂರಿ ಹಾಕಿ ನಾಮಿನೇಷನ್ ಮಾಡಬೇಕಾಗಿರುತ್ತದೆ. ಯಾಕೆಂದರೆ ಬಿಗ್ ಬಾಸ್ ನೀಡಿದ ಟಾಸ್ಕ್ ನಿಯಮವೇ ಆ ರೀತಿಯಾಗಿರುತ್ತದೆ. ಮನೆಯಲ್ಲಿ ಈ ವಾರ ಹಿಂದಿನ ವಾರ ಕ್ಯಾಪ್ಟನ್ ಆಗಿದ್ದ ಉಗ್ರಂ ಮಂಜು ಅವರು ಹಾಗೂ ಐಶ್ವರ್ಯ ನಡುವೆ ಬಿಗ್ ಟಾಕ್ ವಾರ್ ನಡೆದಿದೆ. ಅವರಿಬ್ಬರು ಕೊಟ್ಟುಕೊಂಡ ಕಾರಣ ನೋಡಿ ಆಶ್ಚರ್ಯವಾಗಿದೆ. ಬಿಗ್ ಬಾಸ್ ಮನೆಯ ಇತರ ಸದಸ್ಯರು ಆಶ್ಚರ್ಯದಿಂದ ವೀಕ್ಷಿಸಿದ್ದಾರೆ.
ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಿರುತ್ತಾರೆ. ಅದಕ್ಕೆ ಯಾರೆಲ್ಲಾ ನಾಮಿನೇಟ್ ಮಾಡಲು ಬಯಸುತ್ತಾರೋ ಅವರೆಲ್ಲರೂ ಚೂರಿ ಚುಚ್ಚಬೇಕಿರುತ್ತದೆ. ಉಗ್ರಂ ಮಂಜು ಅವರ ಬೆನ್ನಿಗೆ ತುಂಬಾ ಚೂರಿಗಳು ಇರುವುದು ಕಾಣಿಸುತ್ತದೆ. ಆದರೆ ಐಶ್ವರ್ಯ ಅವರ ಬೆನ್ನಿಗೆ ಮಾತ್ರ ಒಂದು ಚೂರಿ ಕಾಣಿಸುತ್ತದೆ. ಆದರೆ ಕೊಟ್ಟ ಕಾರಣಗಳು ಮಾತ್ರ ಮನೆಯಲ್ಲಿ ಚುರುಕು ಮುಟ್ಟಿಸಿದೆ. ಮನೆಯ ಎಲ್ಲಾ ಸದಸ್ಯರು ಈ ವಾರದ ಕ್ಯಾಪ್ಟನ್ ಧನರಾಜ್ ಆಚಾರ್ ಅವರೊಬ್ಬರನ್ನು ಬಿಟ್ಟು, ಉಳಿದವರೆಲ್ಲರೂ ಇದೇ ರೀತಿ ನಾಮಿನೇಷನ್ನಲ್ಲಿ ಭಾಗಿಯಾಗಿದ್ದಾರೆ.
ನಾಮಿನೇಷನ್ ಮಾಡುವ ಸಂದರ್ಭದಲ್ಲಿ ಐಶ್ವರ್ಯ ಅವರು ಕೊಟ್ಟ ಕಾರಣ ಸರಿ ಇಲ್ಲ ಎಂದು ಮಂಜು ವಾದ ಮಾಡಿದ್ದಾರೆ. ನೀವು ಆ ಕಾರಣ ಕೊಡೋದು ತಪ್ಪು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಿರುವಾಗ ಅವರು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಐಶ್ವರ್ಯ ನೀಡಿದ ಕಾರಣ ಸರಿಯಾಗೇ ಇದೆ ಎಂದು ಹಲವರು ಹೇಳಿದ್ದಾರೆ. ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಐಶ್ವರ್ಯ ಹೇಳುತ್ತಾರೆ.. ಈ ಹಿಂದೆ ಟಾಸ್ಕ್ ವೇಳೆಯಲ್ಲಿ ತಾನು ಮಹಾರಾಜ ಎಂಬ ಧರ್ಪದಲ್ಲಿ ಉಗ್ರಂ ಮಂಜು ಅವರು ಜನರನ್ನು ಅಂದರೆ ಪ್ರಜೆಗಳನ್ನು ಎತ್ತಿ ಬಿಸಾಡಿದ್ದಾರೆ. ದೈಹಿಕವಾಗಿ ಅವರು ಅಟ್ಯಾಕ್ ಮಾಡಿದ್ದಾರೆ ಎಂದು ಕಾರಣ ಕೊಟ್ಟಿದ್ದಾರೆ.
ಆಗ ಉಗ್ರಂ ಮಂಜು ನಾನು ನನ್ನ ಸಿಂಹಾಸನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆ. ಅದನ್ನು ನೀವು ನಾಮಿನೇಷನ್ ಕಾರಣವಾಗಿ ನೀಡುವಹಾಗಿಲ್ಲ ಎಂದು ಹೇಳಿದ್ದಾರೆ. ಇದೇ ಮಾತಿಗೆ ಮಾತು ಬೆಳೆದಿದೆ. ಜಗಳ ದೊಡ್ಡದಾಗುತ್ತಾ ಸಾಗಿದೆ. “ಮಾನಸಿಕವಾಗಿ ಕುಗ್ಗಿಸಲು ನೋಡಿದ್ರೆ, ಕುಗ್ಗೋ ಮಗಳೇ ಅಲ್ಲ ನಾನು” ಎಂದು ಐಶ್ವರ್ಯ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






