ಬೆಂಗಳೂರಿನ ಗುರುದ್ವಾರಕ್ಕೆ ಬಾಂಬ್ ಸ್ಫೋಟ ಬೆದರಿಕೆ! ಇ-ಮೇಲ್‌ʼನಿಂದ ಹೆಚ್ಚಿದ ಆತಂಕ 

ಆಗಸ್ಟ್ 29, 2025 - 12:03
 0  15
ಬೆಂಗಳೂರಿನ ಗುರುದ್ವಾರಕ್ಕೆ ಬಾಂಬ್ ಸ್ಫೋಟ ಬೆದರಿಕೆ! ಇ-ಮೇಲ್‌ʼನಿಂದ ಹೆಚ್ಚಿದ ಆತಂಕ 

ಬೆಂಗಳೂರು:ಕರ್ನಾಟಕದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವರ್ಷ ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್​​ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಹುಸಿ ಬೆದರಿಕೆ ಸಂದೇಶಗಳು ಹೆಚ್ಚಾಗಿವೆ. ಸಿಖ್ ಗುರುದ್ವಾರದ ಶೌಚಾಲಯದಲ್ಲಿ ಬಾಂಬೆ ಇಟ್ಟಿದ್ದಾಗಿ ಈ ಮೇಲ್ ಸಂದೇಶ ಬಂದಿತ್ತು. ರಾಜಗಿರಿ ಎಂಬ ಹೆಸರಿನಲ್ಲಿ ಈ ಒಂದು ಇಮೇಲ್ ಬೆದರಿಕೆ ಸಂದೇಶ ಬಂದಿದೆ.

ಮೇಲ್‌ನಲ್ಲಿ, ಶೀಘ್ರವೇ 4 RDX IED ನಿಮ್ಮ ಗುರುದ್ವಾರದ ಬಾತ್ರೂಮ್‌ನಲ್ಲಿ ಬಾಂಬ್ ಸ್ಫೋಟಿಸುತ್ತದೆ. 8 ಗಂಟೆಯೊಳಗೆ ಎಲ್ಲವನ್ನೂ ಸ್ಥಳಾಂತರಿಸಿ ಎಂದು ಬರೆದಿದ್ದಾರೆ. ಹಲಸೂರು ಕೆರೆ ಬಳಿಯಿರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಕಳೆದ 4 ದಿನದ ಹಿಂದೆ `De-Brahminize Dravidistan’ ಎಂಬ ಸಂಘಟನೆಯಿಂದ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆ ಬಂದಿದೆ.

ಈ ಕುರಿತು ಋಷಿಪಾಲ್ ಸಿಂಗ್ ಎಂಬುವವರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow