ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್: ಹೋಂ ಗಾರ್ಡ್ ಗೆ ಪತ್ನಿ ಮೇಲೆ ಹುಟ್ಟಿತ್ತು ಆ ಅನುಮಾನ! ಮಚ್ಚು ತೆಗೆದು ಬೀಸಿದ! ಹರಿಯಿತು ನೆತ್ತರು

ಜನವರಿ 9, 2025 - 16:02
 0  32
ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್: ಹೋಂ ಗಾರ್ಡ್ ಗೆ ಪತ್ನಿ ಮೇಲೆ ಹುಟ್ಟಿತ್ತು ಆ ಅನುಮಾನ! ಮಚ್ಚು ತೆಗೆದು ಬೀಸಿದ! ಹರಿಯಿತು ನೆತ್ತರು

ಬೆಂಗಳೂರು:-  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂವರ ಭೀಕರ ಕೊಲೆಯಾಗಿದೆ.. ಪತಿಯೇ, ಪತ್ನಿ, ಮಗಳು, ದೊಡ್ಡಮ್ಮನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.. ಆ ಟ್ರಿಪಲ್ ಮರ್ಡರ್ ನ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ..

ಇದು ನಿಜಕ್ಕೂ ಭೀಕರ.. ಸಿನಿಮಾಗಳಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಕೊಲೆ ಮಾಡುವ ರೀತಿ ನಡೆದಿರುವ ಕೊಲೆ.. ಹೌದು, ಬೆಂಗಳೂರಿನ ಪೀಣ್ಯ ಬಳಿಯ ಜಾಲಹಳ್ಳಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.. ಹೆಬ್ಬಗೊಡಿಯಲ್ಲಿ ಹೊಮ್ ಗಾರ್ಡ್ ಆಗಿ‌ ಕೆಲಸ ಮಾಡುವ 42 ,ವರ್ಷದ ಗಂಗರಾಜು, 38 ವರ್ಷದ ಪತ್ನಿ ಭಾಗ್ಯ, 19 ವರ್ಷದ ಮಗಳು ನವ್ಯ, 23 ವರ್ಷದ ಹೇಮಾಲತಾ ಅನ್ನೋರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.. 

ಎಸ್, ಸಿಲಿಕಾನ್ ಸಿಟಿಯಲ್ಲಿ ಪತಿ ಹೋಂ ಗಾರ್ಡ್ ಒಂದೆ ಮನೆಯಲ್ಲಿ ಮೂವರನ್ನು ಭೀಕರವಾಗಿ ಕತ್ತರಿಸಿ ಕೊಲೆ ಮಾಡಿದ್ದ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿತ್ತು. 

ಕೊಲೆಯಾದ ಭಾಗ್ಯಮ್ಮ ತನ್ನ ಗಂಡನಿಗೆ ವಿಚ್ಛೇದನ ನೀಡದೆ ಆರೋಪಿ ಗಂಗರಾಜು ಜೊತೆ ಲೀವಿಂಗ್ ಇನ್ ರಿಲೇಷನ್​ನಲ್ಲಿ ಇದ್ದರು. ಇತ್ತ ಗಂಗರಾಜು ಕೂಡ ತನ್ನ ಮೊದಲ ಪತ್ನಿಗೆ ಡಿವೋರ್ಸ್ ನೀಡದೆ ಭಾಗ್ಯಮ್ಮ ಮತ್ತು ಆಕೆಯ ಮಗಳ ಜೊತೆ ವಾಸವಿದ್ದ ಎಂದು ತಿಳಿದುಬಂದಿದೆ.

ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ದರೂ ಕೂಡ ಆರೋಪಿ ಗಂಗರಾಜು ಆಕೆಯ ಜೊತೆ ಸಹ ಜೀವನಕ್ಕೆ ಒಪ್ಪಿದ್ದ. ಆದರೆ, ಭಾಗ್ಯಮ್ಮ ಸೇರಿದಂತೆ ಇಬ್ಬರು ಹೆಣ್ಣುಮಕ್ಕಳ ಮೇಲೂ ಸಾಕಷ್ಟು ಅನುಮಾನ ಪಡ್ತಿದ್ದ. ಪತ್ನಿ ಅಲ್ಲದೆ ಆಕೆಯ ಮಗಳಿಗೂ ಕೂಡ ಅಕ್ರಮ ಸಂಬಂಧವಿದೆ ಎಂದು ಗಂಗರಾಜು ಅನುಮಾನ ಪಡುತ್ತಿದ್ದ. ಇತ್ತೀಚೆಗೆ ಮನೆಗೆ ಬಂದಿದ್ದ ಮೃತ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಇತ್ತು ಎನ್ನಲಾಗಿದೆ.

ಇದೇ ಕಾರಣಕ್ಕೆ ಬುಧವಾರ ಗಲಾಟೆ ಮಾಡಿದ್ದ ಆರೋಪೊ ಕೊಲೆಗೆ ಸಂಚು ರೂಪಿಸಿದ್ದ. ನೆನ್ನೆ ಗಲಾಟೆ ಬಳಿಕ‌ ಹೆಸರಘಟ್ಟಗೆ ಹೋಗಿದ್ದ ಆರೋಪಿ, ರೈತರ ಸಂತೆಯಲ್ಲಿ 500 ರೂಪಾಯಿ ಕೊಟ್ಟು ಮಚ್ಚು ಖರೀದಿ ಮಾಡಿದ್ದ. ಆ ಬಳಿಕ ನೇರವಾಗಿ ಮನೆಗೆ ಬಂದು ಮೂವರನ್ನು ಕೊಲೆ ಮಾಡಿ ಶರಣಾಗತಿಗೆ ಪ್ಲ್ಯಾನ್ ಮಾಡಿದ್ದ. ಪತ್ನಿ ಮನೆಯಲ್ಲಿ ಇಲ್ಲದನ್ನ ಮೊದಲೇ ತಿಳಿದು ಒಬ್ಬೊಬ್ಬರನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದ.

ಮನೆಗೆ ಬರುತ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಭಾಗ್ಯಮ್ಮನ ಮಗಳಾದ ನವ್ಯಳ ಕತ್ತಿಗೆ ಮಚ್ಚು ಬೀಸಿದ್ದ. ಹೀಗಿರುವಾಗ ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚು ಬೀಸಿ ಇಬ್ಬರ ರುಂಡ ಮುಂಡ ಬೇರ್ಪಡಿಸಿದ್ದ. ಇಬ್ಬರನ್ನ ಕೊಂದು ಮನೆಯಲ್ಲಿ ಪತ್ನಿಗಾಗಿ ಬಾಗಿಲ ಹಿಂದೆ ಕಾದಿದ್ದ. ಪತ್ನಿ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಮಗಳನ್ನು ನೋಡಿ ಕಿರುಚಾಡಿದ್ದಳೆ ಇದೇ ವೇಳೆ ಪತ್ನಿಯ ಮೇಲೂ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದ. ನವ್ಯ (19), ಹೇಮಾವತಿ (22), ಭಾಗ್ಯಮ್ಮ (38), ಅವರನ್ನು ಕೊಲೆ ಮಾಡಿ ನೇರವಾಗಿ ಮಚ್ಚು ಹಿಡಿದೇ ಪೀಣ್ಯಾ ಠಾಣೆಯಲ್ಲಿ ಸರೆಂಡರ್​ ಆಗಿದ್ದು, ಪೊಲೀಸರು ಆರೋಪಿಯನ್ನ ಹೆಚ್ಚಿನ ವಿಚಾರಣೆ ಒಳಪಡಿಸಿದ್ದಾರೆ ಎನ್ನಲಾಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow